ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ ಐಟಿ ಬಂಧಿಸುವ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಇದೆ ಎಂದು ನಾವು ಹಿಂದೆಯೇ ಹೇಳಿದ್ದೆವು. ಈ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡಿತು. ದೂರುದಾರನ ಹಿನ್ನೆಲೆ ತಿಳಿದುಕೊಳ್ಳದೇ ಎಸ್ ಐಟಿ ರಚನೆ ಮಾಡಿದರು. ಈಗ ಎಸ್ ಐಟಿಯಿಂದ ಬರೀ ಬುರುಡೆ ಸಿಕ್ಕಿತು ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾಮನ್ ಸೆನ್ಸ್ ನಿಂದ ಯೋಚನೆ ಮಾಡಬೇಕಿತ್ತು. ಈಗ ಆಗಿರುವ ಅಪಪ್ರಚಾರವನ್ನು ಸಿದ್ದರಾಮಯ್ಯ ಸರಿಪಡಿಸುತ್ತಾರಾ? ಅನನ್ಯಾ ಭಟ್ ವಿಚಾರವೂ ಬುರುಡೆ ಅಂತಾ ಗೊತ್ತಾಯಿತು. ಇದಕ್ಕೆಲ್ಲಾ ಸೂತ್ರಧಾರ ಆ ಸಮೀರ್. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.