ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ನನಗೇನೂ ಸಿಎಂ ಆಗಲು ಆತುರವಿಲ್ಲ ಎಂದು ಹೇಳಿದ್ದಾರೆ. ಬಹಿರಂಗ ಹೇಳಿಕೆಗಳನ್ನು ನೀಡದಂತೆ ಈಗಾಗಲೇ ನೋಟಿಸ್ ನೀಡಿದ್ದರೂ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ನೋಟೀಸ್ ಕೊಟ್ಟರೂ ಹೇಳುತ್ತಿದ್ದಾರೆ ಎಣ್ದರೆ ಎಷ್ಟು ಧೈರ್ಯವಿರಬೇಕು ಅವರಿಗೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಇಕ್ಬಾಲ್ ಹುಸೇನ್ ಅವರು ಅಷ್ಟು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಅಂದರೆ ನಿಖರತೆ ಇದೆ ಎಂದರ್ಥ. ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆ ಅನ್ನೋದು ಪಕ್ಕಾ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಅನ್ನುವುದಾದರೆ ಜಾತಿಗಣತಿಗೆ ಆತುರವೇನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದೆಲ್ಲವೂ ನಂಬೆರ್ ಕ್ರಾಂತಿಯ ಸಂಕೇತ. ಗ್ರಹಣ ಕಾಲದಲ್ಲಿ ಕತ್ತಲಾದಂತೆ ಸಿದ್ದರಾಮಯ್ಯ ಪಾಲಿಗೆ ಕತ್ತಲು. ಡಿ.ಕೆ.ಶಿವಕುಮಾರ್ ಪಾಲಿಗೆ ಬೆಳಕು ಶುರುವಾಗಿದೆ. ಬೆಂಬಲಿಗರ ಹೇಳಿಕೆ ಹಿಂದೆ 100% ಡಿಸಿಎಂ ಡಿ.ಕೆ ಇದ್ದಾರೆ ಎಂದು ಹೇಳಿದರು.