ಬೆಂಗಳೂರು: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಇದೀಗ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಸಾಹಿತಿ ಬಾನು ಮುಷ್ತಾಕ್ ಹಸುವಿನ ಮಾಂಸ ತಿನ್ನುತ್ತಾರೆ. ಇಂತವರಿಂದ ದಸರಾ ಉದ್ಘಾಟನೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ದಸರಾ ಉದ್ಘಾಟನೆಗೂ ಮುನ್ನ ಗೋಪೂಜೆ, ನಂದಿ ಪೂಜೆ ಮಾಡಲಾಗುತ್ತದೆ. ಆದರೆ ಬಾನು ಮುಷ್ತಾಕ್ ಹಸುವಿನ ಮಾಂಸ ತಿನ್ನುವವರು. ಒಂದುಕಡೆ ಹಸುವನ್ನು ಕಡಿದು ತಿನ್ನುವಂತವರು, ಹಸುವನ್ನು ಪೂಜಿಸಲು ಹೇಗೆ ಸಾಧ್ಯ? ಇದು ನಮ್ಮ ಸಂಪ್ರದಾಯ, ಆಚಾರ-ವಿಚಾರಕ್ಕೆ ವಿರುದ್ಧವಾಗಿದೆ. ಅವರಿಂದ ದಸರಾ ಉದ್ಘಾಟನೆ ಮಾಡಿಸಿದರೆ ಹಿಂದೂ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂದು ಕಿಡಿಕಾರಿದರು.
ನಮ್ಮ ಹಿಂದೂ ಸಂಪ್ರದಾಯದ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಒಂದೆಡೆ ಹಸುವನ್ನು ಕಡಿದು ತಿನ್ನುವವರು ಅದನ್ನು ಪೂಜೆ ಮಾಡಲು ಹೇಗೆ ಸಾದ್ಯ? ಇದು ಅಪಚಾರವಲ್ಲವೇ? ಎಂದು ಕೇಳುತ್ತಿದ್ದಾರೆ. ಬಾನು ಮುಷ್ತಾಕ್ ಅವರಿಂದ ದಸರಾ ಉದ್ಗಾಟನೆ ಆಯ್ಕೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.