ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್ ನಲ್ಲಿ ಕೊಹ್ಲಿಯ ದಾಖಲೆಗಳು ಕ್ರೀಡಾಪ್ರೇಮಿಗಳಲ್ಲಿ ಬೆರಗು ಹುಟ್ಟಿಸುತ್ತವೆ.
ಅವರ ಅಪಾರ ಅಭಿಮಾನಿಗಳು ಕೊಹ್ಲಿಯ ಅಸಾಧಾರಣ ಬ್ಯಾಟಿಂಗ್ ಕೌಶಲ್ಯಗಳನ್ನು ಆರಾಧಿಸುತ್ತಾರೆ. ಕೊಹ್ಲಿ ಬಗ್ಗೆ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದೆ ಎಂದರೆ ಅವರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಇದೀಗ ಅಂಥದ್ದೊಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
9ನೇ ತರಗತಿ ಪಶ್ನೆಪತ್ರಿಕೆಯೊಂದರಲ್ಲಿ ಕೊಹ್ಲಿ ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ ಚಿತ್ರವನ್ನು ನೀಡಿದ್ದು, ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚಿತ್ರದ ಬಗ್ಗೆ ಸುಮಾರು 100-120 ಪದಗಳಲ್ಲಿ ವಿವರಿಸಲು ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಕೊಹ್ಲಿ ಅಭಿಮಾನಿಗಳು ಇಂತಹ ಪ್ರಶ್ನೆಗೆ ಉತ್ತರಿಸುವ ಮೂಲಕ ಸುಲಭವಾಗಿ ಪೂರ್ಣ ಅಂಕಗಳನ್ನು ಗಳಿಸಬಹುದು ಎಂದು ಹೇಳಿದ್ದಾರೆ.
ಶಾಲಾ ಪರೀಕ್ಷೆಯಲ್ಲಿ ಇಂತಹ ಪ್ರಶ್ನೆಯನ್ನು ಸೇರಿಸಿರೋದ್ರಿಂದ ಕೊಹ್ಲಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ . ಅನೇಕರು ಈ ವಿಷಯದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದು ನಾನು ಅದರ ಬಗ್ಗೆ ಕನಿಷ್ಠ 2-3 ಸಾವಿರ ಪದಗಳನ್ನು ಬರೆಯುತ್ತೇನೆ ಎಂದು ಕೊಹ್ಲಿ ಅಭಿಮಾನಿಗಳು ಹೇಳಿದ್ದಾರೆ.
https://twitter.com/CricCrazyJohns/status/1639480678785093633?ref_src=twsrc%5Etfw%7Ctwcamp%5Etweetembed%7Ctwterm%5E1639480678785093633%7Ctwgr%5E57b1892624645b5b7bbdd973592f0898fc9cc25d%7Ctwcon%5Es1_&ref_url=https%3A%2F%2Fwww.news18.com%2Fbuzz%2Fquestion-on-virat-kohli-in-class-9th-exam-paper-has-fans-screaming-full-marks-7387069.html