ನಾಗರಾಜ್ ಸೋಮಯಾಜಿ ನಿರ್ದೇಶನದಲ್ಲಿ ಮೂಡಿಬಂದ ‘ಮರ್ಯಾದೆ ಪ್ರಶ್ನೆ’ ಚಿತ್ರ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ನಾಲ್ಕು ವಾರಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. 25 ದಿನ ಪೂರೈಸಿರುವ ಈ ಸಂಭ್ರಮವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಸಕ್ಕತ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಲ್ಲಿ ಆರ್ ಜೆ ಪ್ರದೀಪ ನಿರ್ಮಾಣ ಮಾಡಿದ್ದು, ರಾಕೇಶ್ ಅಡಿಗ, ಸುನೀಲ್ ರಾವ್ ಸೇರಿದಂತೆ ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮುಂಡ್ಕೂರ್, ಶೈನ್ ಶೆಟ್ಟಿ, ಶ್ರವಣ್ ಕುಮಾರ್, ಹರಿಹರನ್ ವಿ, ಮಹೇಶ್ ನಂಜುಂಡಯ್ಯ, ಟಿ.ಎಸ್. ನಾಗಾಭರಣ, ಪ್ರಕಾಶ್ ತುಂಭಿನಾಡ್, ನಂದಗೋಪಾಲ್, ಶ್ವೇತಾ ಆರ್. ಪ್ರಸಾದ್, ಮಂಜು ಪಾವಗಡ, ದಯಾಳ್ ಪದ್ಮನಾಭನ್, ರೇಖಾ ಕೂಡ್ಲಿಗಿ ನಾಗೇಂದ್ರ ಶಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಸಂಕೇತ್ ಶಿವಪ್ಪ ಸಂಕಲನ, ಸಂದೀಪ್ ವಲ್ಲೂರಿ ಛಾಯಾಗ್ರಹಣ ಹಾಗೂ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನವಿದೆ.