ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ದೇಶಕ್ಕೆ ಗುಣಮಟ್ಟ ನಿಯಂತ್ರಣ ಅಗತ್ಯ: ಹೈಕೋರ್ಟ್ ಅಭಿಮತ

ಭಾರತಕ್ಕೆ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್‌ಗಳ ಗುಣಮಟ್ಟ ಪರಿಶೀಲನೆಯಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಭಾರತ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಜನವರಿ 5, 2024 ರಿಂದ ಜಾರಿಗೆ ಬರುವಂತೆ ದೇಶಕ್ಕೆ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್‌ನ ಮೇಲೆ ಗುಣಮಟ್ಟದ ನಿಯಂತ್ರಣವನ್ನು ವಿಧಿಸಲಾಗಿದೆ.

ಗುಣಮಟ್ಟ ನಿಯಂತ್ರಣಕ್ಕೆ ಇದು ಅಗತ್ಯವಾದ ಹೆಜ್ಜೆ ಎಂದು ಹೇಳಿದ ಹೈಕೋರ್ಟ್, “ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿಯಲ್ಲಿ ಸಿದ್ಧಪಡಿಸಿದ ಉತ್ಪನ್ನದ ಗುಣಮಟ್ಟವು ಸರಿಯಾಗಿದ್ದರೆ ಮಾತ್ರ ದೇಶವು ಇತರರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಕಡೆಗಿನ ಹೆಜ್ಜೆಯು ಸ್ಪಷ್ಟವಾದ ಮತ್ತು ಪ್ರದರ್ಶಿಸಬಹುದಾದ ಅನಿಯಂತ್ರಿತತೆಯನ್ನು ಬಿಂಬಿಸುತ್ತದೆ ಎಂಬುದನ್ನು ಹೊರತುಪಡಿಸಿ, ಈ ನ್ಯಾಯಾಲಯವು ಅದರತ್ತ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ಇಂತಹ ಮನವಿ ಪ್ರಸ್ತುತವಲ್ಲ ಎಂದಿದೆ.

ಅಖಿಲ ಭಾರತ ಎಚ್‌ಡಿಪಿಇ/ಪಿಪಿ ನೇಯ್ದ ಬಟ್ಟೆ ತಯಾರಕರ ಸಂಘವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿದೆ.

ಹಿಂದಿನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ನೀತಿ ವಿಷಯಗಳಲ್ಲಿ ನ್ಯಾಯಾಲಯವು ಸರ್ಕಾರದ ಸಲಹೆಗಾರನಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

“ಒಬ್ಬ ನ್ಯಾಯಾಧೀಶರು ರಾಜ್ಯದ ಅಸಂಖ್ಯಾತ ಚಟುವಟಿಕೆಗಳನ್ನು ನಿಯಂತ್ರಿಸುವ ನೀತಿಗಳ ಬಗ್ಗೆ ಆಡಳಿತಕ್ಕೆ ಸರ್ವೋಚ್ಚ ಸಲಹೆಗಾರರ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ವಿಶ್ವದೊಂದಿಗೆ ಸ್ಪರ್ಧಿಸಲು ದೇಶಕ್ಕೆ ಗುಣಮಟ್ಟದ ನಿಯಂತ್ರಣ ಅಗತ್ಯ ಎಂದು ಹೈಕೋರ್ಟ್ ಹೇಳಿದೆ.

“ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದ ಅಡಿಯಲ್ಲಿ ಉತ್ಪನ್ನವನ್ನು “ಮೇಡ್ ಇನ್ ಇಂಡಿಯಾ” ಟ್ಯಾಗ್ ಅಡಿಯಲ್ಲಿ ರಫ್ತು ಮಾಡಲು ಪ್ರಯತ್ನಿಸಿದರೆ, ಅಂತಿಮ ಉತ್ಪನ್ನದ ಗುಣಮಟ್ಟವು ಅಗತ್ಯವಿರುವ ಎಲ್ಲಾ ಜಾಗತಿಕ ಮಾನದಂಡಗಳನ್ನು ಪೂರೈಸುವುದನ್ನ ಖಚಿತಪಡಿಸುತ್ತದೆ” ಎಂದು ಹೈಕೋರ್ಟ್ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read