ರೆಟ್ರೋ ಬೈಕ್ ಪ್ರಿಯರಿಗೆ ಕ್ಯೂಜೆ ಮೋಟರ್‌ ತಂದ SRC 500

ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಕ್ಯೂಜೆ ಮೋಟರ್‌ ನಾಲ್ಕು ಬಹಳ ಆಸಕ್ತಿಕರ ಆಫರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳ ಪೈಕಿ ರೆಟ್ರೋ ಮಾದರಿಯಲ್ಲಿರುವ SRC 500 ತನ್ನ ಲುಕ್ಸ್ ಹಾಗೂ ಪ್ರದರ್ಶನದಿಂದ ಹೆಚ್ಚು ಗಮನ ಸೆಳೆಯುತ್ತಿದೆ.

480 ಸಿಸಿ ಸಿಂಗಲ್-ಸಿಲಿಂಡರ್‌ ಚಾಲಿತ ಈ ಬೈಕ್ ಶೂನ್ಯದಿಂದ 100ಕಿಮೀ/ಗಂಟೆ ವೇಗವನ್ನು 12 ಸೆಕೆಂಡ್‌ಗಳಲ್ಲಿ ತಲುಪಬಲ್ಲದು. 130ಕಿಮೀನಷ್ಟು ಸುಸ್ಥಿರ ವೇಗವನ್ನು ಯಾವುದೇ ವೈಬ್ರೇಷನ್ ಇಲ್ಲದೇ ಕಾಪಾಡಿಕೊಳ್ಳಬಲ್ಲದು SRC 500.

205ಕೆಜಿ ತೂಕವಿರುವ SRC 500 ಸವಾರರಿಗೆ ಸೂಕ್ತವಾದ ರೈಡಿಂಗ್ ಭಂಗಿಯಲ್ಲಿ ಇರುವಂತೆ ವಿನ್ಯಾಸಗೊಳಿಸಿದ್ದು, ಅಷ್ಟು ಭಾರವಿದೆ ಎಂದು ಅನಿಸುವುದಿಲ್ಲ. ಇದರಿಂದಾಗಿ ನಗರದ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುಲಭವಾಗಿ ಬೈಕ್‌ ಅನ್ನು ಸವಾರಿ ಮಾಡಿಕೊಂಡು ಹೋಗಬಹುದು.

ಅತ್ಯತ್ತಮ ಗುಣಮಟ್ಟದ ಬ್ರೇಕಿಂಗ್ ಹೊಂದಿರುವ SRC 500ಯನ್ನು 100ಕಿಮೀ/ಗಂಟೆಯಿಂದ ಶೂನ್ಯಕ್ಕೆ ಇಳಿಸಲು 53 ಮೀಟರ್‌ನಷ್ಟು ಅಂತರ ಸಾಕಾಗುತ್ತದೆ. ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 500‌ ಅನ್ನು ನೆನಪಿಸುವಂತಿದೆ SRC 500.

2,79,000 ರೂ. (ಎಕ್ಸ್‌ಶೋರೂಂ) ಬೆಲೆ ಹೊಂದಿರುವ SRC 500 ಮೂಲಕ ಭಾರತದಲ್ಲಿ ಕ್ಯೂಜೆ ಮೋಟರ್‌ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಸದ್ಯದ ಮಟ್ಟಿಗೆ ಬೈಕ್‌ನ ಮಾರಾಟನಂತರದ ಬೆಂಬಲದ ಮೂಲ ಸೌಕರ್ಯವನ್ನು ಕಂಪನಿ ಇನ್ನಷ್ಟೇ ಸ್ಥಾಪಿಸಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read