ಪಿ.ವಿ. ಸಿಂಧೂ ಜೊತೆ ಬ್ಯಾಡ್ಮಿಂಟನ್ ಪಂದ್ಯ ಆಡಲು ಬಯಸಿದ ಆಪಲ್ ಕಂಪೆನಿ ಸಿಇಒ

ಭಾರತೀಯ ಬ್ಯಾಡ್ಮಿಂಟನ್‌ನ ಸೆನ್ಸೇಷನ್ ಆಟಗಾರ್ತಿ ಪಿವಿ ಸಿಂಧು ಇತ್ತೀಚೆಗೆ ಆಪಲ್ ಕಂಪೆನಿಯ ಸಿಇಒ ಟಿಮ್ ಕುಕ್ ಅವರನ್ನು ಭೇಟಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನಲ್ಲಿ ಟೆಕ್ ದಿಗ್ಗಜರ ಪ್ರಮುಖ ಕಾರ್ಯಕ್ರಮದ ಸಂದರ್ಭದಲ್ಲಿ ಈ ಭೇಟಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಸಿಂಧು ಅವರು ಅಲ್ಲಿನ ಸುತ್ತಮುತ್ತಲಿನ ಪರಿಸರ ಕಂಡು ಬೆರಗಾದರು. ಇದರ ಜೊತೆ ಕುಕ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದ್ದು ಅವರ ಆಶ್ಚರ್ಯಕ್ಕೆ ಕಾರಣವಾಯಿತು.

ಸಿಂಧು ತಮ್ಮ ಈ ಸಂಭ್ರಮವನ್ನು, ಸ್ಮರಣೀಯ ಕ್ಷಣವನ್ನು ಸಾಮಾಜಿಕ ಜಾಲತಾಣ ಸ್ನ್ಯಾಪ್‌ಚಾಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್‌ಗೆ ನೀಡಿದ ಕ್ಯಾಪ್ಷ ನ್‌ನಲ್ಲಿ ತನ್ನನ್ನು ಆಹ್ವಾನ ಮಾಡಿದಕ್ಕಾಗಿ ಟಿಮ್ ಕುಕ್‌ಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಜೊತೆಗೆ ಆಪಲ್ ಪಾರ್ಕ್ ಅನ್ನು ನೋಡಿದರ ಬಗೆಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

“ಆಪಲ್ ಕ್ಯುಪರ್ಟಿನೊದಲ್ಲಿ ಟಿಮ್ ಕುಕ್ ಅವರನ್ನು ಭೇಟಿಯಾಗಿದ್ದು ಇದೊಂದು ಮರೆಯಲಾಗದ ಕ್ಷಣ..! ನನ್ನನ್ನು ಆಹ್ವಾನಿಸಿದಕ್ಕಾಗಿ ಟಿಮ್ ಅವರಿಗೆ ಧನ್ಯವಾದಗಳು. ಬೆರಗುಗೊಳಿಸುವಂತ ಆಪಲ್ ಪಾರ್ಕ್ ಅನ್ನು ನೋಡಲು ಮತ್ತು ನಿಮ್ಮನ್ನು ಭೇಟಿಯಾಗಿದಕ್ಕೆ ಸಂತೋಷವಾಯಿತು..! ನೀವು ಮುಂದೆ ಭಾರತಕ್ಕೆ ಭೇಟಿ ನೀಡಿದಾಗ ಬ್ಯಾಡ್ಮಿಂಟನ್ ಆಡುವ ತಮ್ಮ ಆಮಂತ್ರಣವನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೇನೆ”ಎಂದು ಸಿಂಧು ಅವರು ಕ್ಯಾಪ್ಸನ್‌ನಲ್ಲಿ ಬರೆದುಕೊಂಡಿದ್ದಾರೆ.

ಆಪಲ್ ಪಾರ್ಕ್‌ನಲ್ಲಿ ಸೆಲೆಬ್ರಿಟಿಗಳ ಜೊತೆ ನಡೆದ ಈ ಈವೆಂಟ್‌ನಲ್ಲಿ ನೂತನ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಯಿತು. ಆಪಲ್ ಐಫೋನ್ 15 ಸರಣಿ ಮತ್ತು ಹೊಸ ಐ ವಾಚ್‌ಗಳನ್ನು ಇದೇ ಸಂದರ್ಭ ಲಾಂಚ್ ಮಾಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read