ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಪ್ರವಾಸಕ್ಕಾಗಿ ರಷ್ಯಾಗೆ ತೆರಳಿದ್ದು, ಸೋಮವಾರ ಬಂದಿಳಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಗಿತ್ತು. ಅಲ್ಲದೆ ರಾಜಸ್ಥಾನಿ ಹಾಡು – ನೃತ್ಯದ ಮೂಲಕ ರಷ್ಯಾ ಕಲಾವಿದರು ಮೋದಿಯವರನ್ನು ಬರಮಾಡಿಕೊಂಡಿದ್ದರು.
ನರೇಂದ್ರ ಮೋದಿಯವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ನೆಚ್ಚಿನ ಸ್ನೇಹಿತನನ್ನು ಪುಟಿನ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿದ್ದಾರೆ.
ನರೇಂದ್ರ ಮೋದಿಯವರ ಎನರ್ಜಿಯನ್ನು ಕೊಂಡಾಡಿದ ಪುಟಿನ್, ಭಾರತ ಮತ್ತು ರಷ್ಯಾ ಪರಸ್ಪರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಎಲೆಕ್ಟ್ರಿಕ್ ಕಾರಿನಲ್ಲಿ ನರೇಂದ್ರ ಮೋದಿಯವರನ್ನು ಕೂರಿಸಿಕೊಂಡು ಸ್ವತಃ ವ್ಲಾಡಿಮಿರ್ ಪುಟಿನ್ ಡ್ರೈವ್ ಮಾಡುವ ಮೂಲಕ ತಮ್ಮ ನಿವಾಸದ ಸುತ್ತ ರೌಂಡ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಮಹತ್ವದ ಮಾತುಕತೆ ನಡೆಸಿದ್ದಾರೆ.
https://twitter.com/MrSinha_/status/1810382382970622140?ref_src=twsrc%5Etfw%7Ctwcamp%5Etweetembed%7Ctwterm%5E1810382382970622140%7Ctwgr%5E5ffc34e3369b96359e20d04b0e6eda109724824c%7Ctwcon%5Es1_&ref_url=https%3A%2F%2Fwww.etvbharat.com%2Fen%2Finternational%2Frussian-president-putin-praises-pm-modi-during-private-engagement-at-his-official-residence-enn24070900218
https://twitter.com/narendramodi/status/1810368302176190843?ref_src=twsrc%5Etfw%7Ctwcamp%5Etweetembed%7Ctwterm%5E1810368302176190843%7Ctwgr%5E5ffc34e3369b96359e20d04b0e6eda109724824c%7Ctwcon%5Es1_&ref_url=https%3A%2F%2Fwww.etvbharat.com%2Fen%2Finternational%2Frussian-president-putin-praises-pm-modi-during-private-engagement-at-his-official-residence-enn24070900218