ಮನೆಯಲ್ಲಿ ನೆಮ್ಮದಿ ನೆಲೆಸಲು ಈ ಬಣ್ಣದ ಕುದುರೆ ಫೋಟೋ ಹಾಕಿ

ಹೌದು……ಮನೆಯಲ್ಲಿರುವ ಕುದುರೆಯ ಚಿತ್ರ ಅಥವಾ ವಿಗ್ರಹ ಯಾವ ಬಣ್ಣದಲ್ಲಿರಬೇಕೆಂದು ವಾಸ್ತು ಶಾಸ್ತ್ರಜ್ಞರು ತಿಳಿಸಿದ್ದು ಕುದುರೆಯ ಬಣ್ಣವು ಮನೆಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ಬಣ್ಣಗಳ ಕುದುರೆಗಳು ಪ್ರಗತಿ ಮತ್ತು ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ಹೀಗಿದ್ದರೂ ಸಹ ಮನೆಯಲ್ಲಿರುವ ಕುದುರೆಯ ಚಿತ್ರ ಅಥವಾ ವಿಗ್ರಹಕ್ಕೆ ಬಿಳಿ ಬಣ್ಣದ ಆಯ್ಕೆ ಉತ್ತಮ ಎಂದು ವಾಸ್ತು ಶಾಸ್ತ್ರಜ್ಞ ತಿಳಿಸಿದ್ದಾರೆ‌.

ಕುದುರೆ ಶಕ್ತಿಯನ್ನು ಸಂಕೇತಿಸಿದರೆ ಬಿಳಿ ಬಣ್ಣ ಶಾಂತಿ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಇದು ಮನೆಯಲ್ಲಿ, ಮನಸ್ಸಿನಲ್ಲಿ ಪ್ರಕ್ಷುಬ್ಧತೆಯನ್ನು ಶಾಂತಗೊಳಿಸುವ ಸಂಕೇತವಾಗಿದೆ. ಶಿಕ್ಷಣವನ್ನು ಪಡೆಯಲು ಮತ್ತು ಜೀವನದಲ್ಲಿ ಪಾಸಿಟಿವ್ ಎನರ್ಜಿಯನ್ನು ಉಂಟು ಮಾಡುತ್ತದೆ.

ಇದು ನಮ್ಮ ಮನಸ್ಸು ಮತ್ತು ಮೆದುಳನ್ನು ಶುದ್ಧೀಕರಿಸುತ್ತದೆ. ಜೊತೆಗೆ ನಮ್ಮನ್ನು ಅಧ್ಯಾತ್ಮದೊಂದಿಗೆ ಬೆರೆಯಲು ಸಹಕಾರಿಯಾಗುತ್ತಿದೆ. ಹೀಗಾಗಿ ಮನೆಯಲ್ಲಿ ಬಿಳಿ ಬಣ್ಣದ ಕುದುರೆಗಳ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.

ಇದಲ್ಲದೆ ಚಿತ್ರದಲ್ಲಿರುವ ಕುದುರೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ಓಡುತ್ತಿರಬಾರದು. ಇದು ಮುಂಭಾಗದ ಕಡೆಗೆ ನೇರವಾಗಿ ಓಡುವಂತಿರಬೇಕು. ಇನ್ನು ವಿಗ್ರಹವನ್ನು ಇರಿಸುವಾಗ ಕುದುರೆಗೆ ಲಗಾಮು ಇರಬಾರದು ಇದನ್ನು ಗಮನಿಸಬೇಕು. ಕುದುರೆಯ ಚಲನೆಗೆ ಯಾವುದೇ ಅಡ್ಡಿ ಉಂಟಾಗದಂತೆ ಇರಬೇಕು. ಕುದುರೆಯ ಚಿತ್ರವನ್ನು ಗೋಡೆಯ ಮೇಲೆ ನೇತು ಹಾಕಬಹುದು ಇಲ್ಲದಿದ್ದರೆ ಅದನ್ನು ನಿಮ್ಮ ಕಚೇರಿಯ ಡೆಸ್ಕ್‌ಟಾಪ್‌ನ ಸ್ಕ್ರೀನ್ ಮೇಲೂ ಹಾಕಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read