ಮನೆಯ ಈ ಜಾಗದಲ್ಲಿ ತಾಮ್ರದ ನಾಣ್ಯ ಇಟ್ಟು ಚಮತ್ಕಾರ ನೋಡಿ….!

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರತ್ನಗಳ ಬಗ್ಗೆ ಹೇಳಲಾಗಿದೆ. ಯಾವ ರತ್ನ ಧಾರಣೆ ಮಾಡಿದ್ರೆ ಏನು ಲಾಭ ಎಂಬುದನ್ನು ವಿವರಿಸಲಾಗಿದೆ. ಹಾಗೆ ತಾಮ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ.

ಮನೆಯಲ್ಲಿ ತಾಮ್ರದ ವಸ್ತುಗಳಿದ್ರೆ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲವಂತೆ. ವಾಸ್ತು ಶಾಸ್ತ್ರದಲ್ಲಿ ತಾಮ್ರದ ವಸ್ತುಗಳು ಯಾವ ಜಾಗದಲ್ಲಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ.

ತಾಮ್ರ ಕಠಿಣ ಕೆಲಸವನ್ನು ಸುಲಭ ಮಾಡುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲು ಇದು ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದ್ದರೆ ವಾಸ್ತು ದೋಷ ದೂರವಾಗುತ್ತದೆ. ಸುಖ-ಶಾಂತಿಯಿಂದ ನೆಲೆಸಲು ಇದು ನೆರವಾಗುತ್ತದೆ. ಜೀವನದಲ್ಲಿ ಯಶಸ್ಸು ಬಯಸಿದ್ರೆ ತಾಮ್ರದ ಕೆಲ ಉಪಾಯಗಳನ್ನು ಅನುಸರಿಸಿ.

ಮನೆಯ ಮುಖ್ಯ ದ್ವಾರ ವಾಸ್ತು ದೋಷಕ್ಕೆ ವಿರುದ್ಧವಾಗಿದ್ದರೆ ಮನೆ ಮುಖ್ಯದ್ವಾರಕ್ಕೆ ತಾಮ್ರದ ನಾಣ್ಯವನ್ನು ಅಂಟಿಸಿ. ಹೀಗೆ ಮಾಡುವುದ್ರಿಂದ ವಾಸ್ತುದೋಷ ಕಡಿಮೆಯಾಗುತ್ತದೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.

ಮನೆಯಲ್ಲಿ ತಾಮ್ರದ ಚೂರನ್ನು ಇಟ್ಟುಕೊಳ್ಳಿ. ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಮನೆಯಲ್ಲಿ ತಾಮ್ರದ ಪಿರಾಮಿಡ್ ಕೂಡ ಇಡಬಹುದು. ಇದು ವಾಸ್ತು ದೋಷವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ತಾಮ್ರದ ಪಿರಾಮಿಡ್ ಮನೆಯ ಪಶ್ಚಿಮ ದಿಕ್ಕಿಗೆ ಇಡಿ. ಇದ್ರಿಂದ ಮನೆಗೆ ಲಾಭವಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read