ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ ಹೆಚ್ಚು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ ಪುಷ್ಪ-2.
ಅಲ್ಲು ಅರ್ಜುನ್‌ನ ಹುಟ್ಟುಹಬ್ಬದ ದಿನದಂದು ’ಪುಷ್ಪ-2: ದಿ ರೂಲ್’ನ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹಿಂದಿ ಚಿತ್ರಗಳ ಪೈಕಿ ಅತ್ಯಂತ ಹೆಚ್ಚು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ ಪುಷ್ಪ-2.
ಹೇರಾ ಪೇರಿ 3, ಜವಾನ್, ಟೈಗರ್ 3 ಹಾಗೂ ಭೂಲ್ ಭುಲಯ್ಯಾ 3 ಈ ಪಟ್ಟಿಯಲ್ಲಿರುವ ಇನ್ನಿತರ ಚಿತ್ರಗಳಾಗಿವೆ.
ಸುಕುಮಾರ್ ನಿರ್ದೇಶನದ ಚಿತ್ರವು ಅಲ್ಲು ಅರ್ಜುನ್‌ರ ಡೈನಾಮಿಕ್ ಆಕ್ಷನ್ ಹಾಗೂ ನೃತ್ಯ ಸ್ಟೆಪ್‌ಗಳನ್ನು ಒಳಗೊಂಡಿರಲಿದೆ.
https://twitter.com/OrmaxMedia/status/1670325529868914689?ref_src=twsrc%5Etfw%7Ctwcamp%5Etweetembed%7Ctwterm%5E1670325529868914689%7Ctwgr%5E83e6183e8d7b218b560a066fd3ec99be2890fe4b%7Ctwcon%5Es1_&ref_url=https%3A%2F%2Fzeenews.india.com%2Fbollywood%2Fpushpa-2-the-rule-holds-first-spot-in-the-most-anticipated-hindi-films-list-2623332.html