ರಾಯಚೂರು : ಶಾಲೆಯಲ್ಲಿ ಪ್ರಾರ್ಥನೆ ವೇಳೆ ತಳ್ಳಾಟ-ನೂಕಾಟ ನಡೆದು 4 ನೇ ತರಗತಿ ವಿದ್ಯಾರ್ಥಿನಿ ಕಾಲು ಮುರಿತಕ್ಕೊಳಗಾದ ಘಟನೆ ರಾಯಚೂರಿನ ಮರ್ಚೆಡ್ ಶಾಲೆಯಲ್ಲಿ ನಡೆದಿದೆ.
ಶಿಕ್ಷಕಿಯರು ಇಲ್ಲದೇ ಇರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೋನಿ ಎಂಬ 4 ನೇ ತರಗತಿ ವಿದ್ಯಾರ್ಥಿನಿ ಕಾಲು ಮುರಿದುಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ದೌಡಾಯಿಸಿ ಶಿಕ್ಷಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರ ಬೇಜವಾಬ್ದಾರಿ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
