ತಾಯಿಯೊಂದಿಗಿದ್ದ ಪ್ರೇಮಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ ಮರ್ಮಾಂಗ ಕತ್ತರಿಸಿದ ಮಗ

ಪಂಜಾಬ್‌ನ ಅಬೋಹರ್‌ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಪ್ರಿಯಕರನ ಮೇಲೆ ಕೊಡಲಿಯಿಂದ ಅಮಾನುಷವಾಗಿ ದಾಳಿ ಮಾಡಿ ಆತನ ಖಾಸಗಿ ಅಂಗವನ್ನ ಕತ್ತರಿಸಿ ಹಾಕಿದ್ದಾನೆ. ಅವನ ಒಂದು ಕಾಲನ್ನು ಮೂರು ತುಂಡುಗಳಾಗಿ ಕತ್ತರಿಸಿ, ಅವನ ಇನ್ನೊಂದು ಕಾಲು ಮತ್ತು ತೋಳನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ.

ಸಂತ್ರಸ್ತನನ್ನು ಸ್ವರಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ತೀವ್ರ ಗಾಯಗಳಾಗಿದ್ದರಿಂದ ಆತನನ್ನು ಮತ್ತೊಂದು ಆಸ್ಪತ್ರೆಗೆ ರೆಫರ್ ಮಾಡಲಾಯ್ತು.
ಪೊಲೀಸರ ಪ್ರಕಾರ ರಾತ್ರಿ ಅನಿರೀಕ್ಷಿತವಾಗಿ ಮನೆಗೆ ಹಿಂದಿರುಗಿದ ನಂತರ ಮಗ, ತನ್ನ ತಾಯಿ ಸ್ವರಣ್ ಸಿಂಗ್ ಜೊತೆ ಖಾಸಗಿಯಾಗಿ ಇದ್ದದ್ದನ್ನ ನೋಡಿ ಕೋಪಗೊಂಡಿದ್ದಾನೆ.

ಬಳಿಕ ಅವನು ಕೊಡಲಿಯನ್ನು ಎತ್ತಿಕೊಂಡು ಆ ಸಮಯದಲ್ಲಿ ಬೆತ್ತಲೆಯಾಗಿದ್ದ ಸಿಂಗ್ ಮೇಲೆ ಹಲ್ಲೆ ಮಾಡಿದನು. ತಾಯಿ ಕತ್ತಲಲ್ಲಿ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ದಾಳಿಯ ನಂತರ ಮಗ ಪೊಲೀಸರಿಗೆ ಕರೆ ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸರು ಬರುವ ಮುಂಚೆ ಸ್ವರಣ್ ಸಿಂಗ್ ಎರಡು ಗಂಟೆಗಳ ಕಾಲ ನರಳುವುದನ್ನು ಹಲ್ಲೆಕೋರ ಮಗ ನೋಡಿದ್ದಾನೆ. ತಾಯಿ ತಮ್ಮ ಕುಟುಂಬಕ್ಕೆ ಕಳಂಕ ತಂದಿದ್ದಾರೆ ಎಂದಿರುವ ಮಗ ಯಾವುದೇ ಪಶ್ಚಾತ್ತಾಪ ಪಟ್ಟಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

https://twitter.com/Gagan4344/status/1802701898937716931?ref_src=twsrc%5Etfw%7Ctwcamp%5Etweetembed%7Ctwterm%5E1802701898937716931%7Ctwgr%5E37ee7c1bbdc30e8e1d4d5bde3a8b8646f0482252%7Ctwcon%5Es1_&ref

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read