ಆಘಾತಕಾರಿ ಘಟನೆಯೊಂದರಲ್ಲಿ ಪಂಜಾಬ್ ನ ಮೊಗಾದಲ್ಲಿ ಕಾಂಗ್ರೆಸ್ ನಾಯಕ ಬಲ್ಜಿಂದರ್ ಸಿಂಗ್ ಅವರನ್ನು ಅವರ ನಿವಾಸದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಈ ಭೀಕರ ಕೊಲೆಯು ಆತಂಕ ಮೂಡಿಸಿದ್ದು, ಪೊಲೀಸರು ತನಿಖೆ ಕೈಗೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿಂಗ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಅವರು ಕೆಲವು ದಾಖಲೆಗಳಿಗೆ ಸಹಿ ಮಾಡುವಂತೆ ವಿನಂತಿಸಿದ್ದಾರೆ. ಇದು ಮಾಮೂಲಿ ವಿಷಯ ಎಂದು ನಂಬಿದ ಅವರು ಕರೆ ಮಾಡಿದವರನ್ನು ಭೇಟಿಯಾಗಲು ತಮ್ಮ ನಿವಾಸದಿಂದ ಹೊರಟರು. ಆದರೆ, ಅವರು ಹೊರಗೆ ಕಾಲಿಟ್ಟ ತಕ್ಷಣ ದಾಳಿಕೋರರು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ನಡೆದ ತಕ್ಷಣ ದಾಳಿಕೋರರು ಸ್ಥಳದಿಂದ ಪಲಾಯನಗೈದಿದ್ದು, ಗಂಭೀರವಾಗಿ ಗಾಯಗೊಂಡ ಸಿಂಗ್ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿದ್ದು, ತನಿಖೆ ಕೈಗೊಂಡಿದ್ದಾರೆ.
CCTV footage captures the murder of Baljinder Singh Bali, the Ajitwal block president of the #Congress party in #Moga district, as a shooter opens fire, causing two gunshot wounds to his chest and stomach. pic.twitter.com/LYDiC0TJ3d
— Puneet Singh Banga Patiala Helpclub (@Puneet_banga_) September 18, 2023