ಇಂದು ಪ್ರೊ ಕಬಡ್ಡಿಯ ಮೊದಲನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಬೆಂಗಾಲ್ ವಾರಿಯರ್ಸ್ ಕಾಳಗ

ಪ್ರೊ ಕಬಡ್ಡಿಯಲ್ಲಿ ಇಂದು ದೈತ್ಯರ ಕಾಳಗವೆಂದರೆ ತಪ್ಪಾಗಲಾರಗದು, ಪ್ರೊ ಕಬಡ್ಡಿಯ ದಿಗ್ಗಜ ಆಟಗಾರ ಫಾಜೆಲ್ ಅತ್ರಾಚಲಿ ಅವರ ಬೆಂಗಾಲ್ ವಾರಿಯರ್ಸ್ ಇಂದು ಸಿಂಹದಮರಿ ಸೈನ್ಯ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಪುಣೇರಿ ಪಲ್ಟನ್, ಫಾಜೆಲ್ ಅತ್ರಾಚಲಿ ಅವರ ಮಾಜಿ ತಂಡವಾಗಿದ್ದು, ಎಲ್ಲಾ ರೈಡರ್ಗಳ ಕುರಿತು ತಿಳಿದುಕೊಂಡಿದ್ದಾರೆ.

ಬೆಂಗಾಲ್ ವಾರಿಯರ್ಸ್ ತಂಡ ಆಡಿರುವ ಹನ್ನೊಂದು ಪಂದ್ಯಗಳಲ್ಲಿ ಇದುವರೆಗೂ ಕೇವಲ ಮೂರು ಪಂದ್ಯಗಳಲ್ಲಿ ಜಯ ಕಂಡಿದ್ದು, ಈ ತಂಡಕ್ಕೆ ಇಂದು  ಮಾಡು ಇಲ್ಲವೇ ಮಡಿ  ಪಂದ್ಯವಾಗಿದೆ. ಟೇಬಲ್ ಟಾಪರ್ ಆಗಿ ಮಿಂಚುತ್ತಿದ್ದ ಪುಣೇರಿ ಪಲ್ಟನ್ ಈ ಬಾರಿ ಅಷ್ಟೇನು ಸದ್ದು ಮಾಡದೆ ಆರನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಬಲಿಷ್ಠ ರೈಡರ್ಸ್ ಹಾಗೂ ಡಿಫೆಂಡರ್ ಗಳನ್ನು ಹೊಂದಿರುವ ಈ ತಂಡಕ್ಕೆ ಬೆಂಗಾಲ್ ವಾರಿಯರ್ಸ್ ಯಾವ ರೀತಿ ಉತ್ತರ ನೀಡಲಿದೆ ಕಾದುನೋಡಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read