ಬೆಟ್ಟದಂಚಿನಲ್ಲಿ ಪುನೀತ್​ ರಾಜ್ ​ಕುಮಾರ್​ ಪುಶಪ್ಸ್​ : ಹಳೆ ವಿಡಿಯೋ ಮತ್ತೆ ವೈರಲ್

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಕಾಲಿಕ ನಿಧನವನ್ನು ಇಂದಿಗೂ ಮರೆಯಲಾಗುತ್ತಿಲ್ಲ. ನಟನಾ ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅಪ್ಪು ಎಲ್ಲರಿಗೂ ಫೇವರಿಟ್​ ಎನಿಸಿದ್ದಾರೆ.

ಇದರ ಜೊತೆಯಲ್ಲಿ ಪುನೀತ್,​ ಫಿಟ್ನೆಸ್​ ಉತ್ಸಾಹಿಗಳಿಗೂ ಸ್ಪೂರ್ತಿಯಾಗಿದ್ದರು. ಪುನೀತ್​ ಟ್ರೆಕ್ಕಿಂಗ್​ ಪ್ರಿಯರೂ ಸಹ ಹೌದು. ಇದಕ್ಕೆ ಸಾಕ್ಷಿ ಅವರ ಅಮೋಘವರ್ಷ ಡಾಕ್ಯೂಮೆಂಟರಿ ಫಿಲಂ.

ಇದರಲ್ಲಿ ಕರ್ನಾಟಕದ ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಇದೀಗ ಪುನೀತ್​ ರಾಜ್​ಕುಮಾರ್​ ಹಳೆಯ ವಿಡಿಯೋವೊಂದು ವೈರಲ್​ ಆಗಿದ್ದು ಇದರಲ್ಲಿ ಎತ್ತರದ ಬಂಡೆಯ ಅಂಚಿನಲ್ಲಿ ಕುಳಿತು ಪುಷಪ್ ಮಾಡುತ್ತಿರೋದನ್ನು ಕಾಣಬಹುದಾಗಿದೆ. ಸ್ಯಾಂಡಲ್​ವುಡ್​ ಗಾಯಕ ನವೀನ್​ ಸಜ್ಜು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಅಜ್ಞಾತ ಗಿರಿಧಾಮದ ಬಂಡೆಯ ಅಂಚಿನಲ್ಲಿ ಪುನೀತ್ ರಾಜ್‌ಕುಮಾರ್ ಒಂದೇ ಬಾರಿಗೆ 50 ಪುಶ್‌ಅಪ್‌ಗಳನ್ನು ಪ್ರದರ್ಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸಮೀಪದಲ್ಲಿ ಸುಂದರವಾದ ಜಲಪಾತವಿದ್ದು, ಅದು ದೃಶ್ಯದ ವೈಭವವನ್ನು ಹೆಚ್ಚಿಸುತ್ತದೆ.

ಪುನೀತ್ ಅಭಿಮಾನಿಗಳು ಕಾಮೆಂಟ್‌ ವಿಭಾಗದಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಇವರಿಂದ ಜಗತ್ತು ಕಲಿಯೋದು ತುಂಬಾನೇ ಇತ್ತು. ಆದರೆ ವಿಧಿ ಅವರನ್ನು ಅಷ್ಟು ಬೇಗ ತನ್ನೆಡೆಗೆ ಕರೆದುಕೊಂಡಿತ್ತು ಎಂದು ಹೇಳಿದ್ದಾರೆ.

https://youtu.be/R6Gdrvko8To

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read