ಬೈಕ್ ಸವಾರನ ಹುಚ್ಚಾಟ; ಮೊಬೈಲ್ ಗೀಳಿಗೆ ಆಕ್ಸಿಡೆಂಟ್…..!

ಪುಣೆಯ ರಸ್ತೆಯಲ್ಲಿ ನಿನ್ನೆ ಒಂದು ಭರ್ಜರಿ ಆಕ್ಸಿಡೆಂಟ್ ಆಯ್ತು. ಒಬ್ಬ ಬೈಕ್ ರೈಡರ್ ಫೋನ್ ನೋಡ್ತಾ ಗಾಡಿ ಓಡಿಸ್ತಾ ಇದ್ದ. ಅಷ್ಟರಲ್ಲಿ ಎಡ ಲೇನ್‌ನಿಂದ ದಿಢೀರ್ ಅಂತ ಬಲಕ್ಕೆ ತಿರುಗಲು ಟ್ರೈ ಮಾಡಿ, ಹತ್ತಿರದಲ್ಲೇ ಹೋಗುತ್ತಿದ್ದ ಕಾರಿಗೆ ಗುದ್ದಿಬಿಟ್ಟ. ಗುದ್ದಿದ ರಭಸಕ್ಕೆ ಫೋನ್ ಮತ್ತೆ ಹೆಲ್ಮೆಟ್ ಎರಡು ರೋಡಿಗೆ ಬಿದ್ದೋಯ್ತು.

ವಿಶೇಷ ಅಂದ್ರೆ, ಬೈಕ್ ಓಡಿಸ್ತಿದ್ದವನು ಹೆಲ್ಮೆಟ್ ಕೂಡ ಹಾಕಿರಲಿಲ್ಲ. ನೋಡೋಕೆ ಭಯಾನಕವಾಗಿತ್ತು. ಆದ್ರೆ, ಆ ದೇವರು ಕಾಪಾಡಿದ ಹಾಗೆ ಏನೂ ಆಗಲಿಲ್ಲ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನಗಳು ಆ ಬೈಕ್ ರೈಡರ್‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಜನರಿಗೆ ಮೊಬೈಲ್ ಫೋನ್ ನೋಡೋದೆ ಮುಖ್ಯವಾಗಿದೆ. ತಮ್ಮ ಜೀವದ ಬಗ್ಗೆ ಕಾಳಜಿನೇ ಇಲ್ಲ” ಅಂತ ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, “ಇವನಿಗೆ ತಪ್ಪು ಮಾಡಿದ್ರೂ ಗೊತ್ತಾಗಲ್ಲ. ಕಾರು ಓಡಿಸ್ತಿದ್ದವನಿಗೆ ಬೈಯ್ದಿರಬೇಕು” ಅಂತ ಹೇಳಿದ್ದಾರೆ. ಇನ್ನು ಕೆಲವರು ಪುಣೆಯ ಟ್ರಾಫಿಕ್ ಪೊಲೀಸರ ಬಗ್ಗೆಯೂ ಮಾತಾಡಿದ್ದಾರೆ. “ಪುಣೆಯಲ್ಲಿ ಇಂಥಾ ಹುಚ್ಚರು ಬೇಕಾದಷ್ಟು ಜನ ಸಿಗ್ತಾರೆ. ಹೈವೇಗಳಲ್ಲೂ ಫೋನ್ ನೋಡ್ತಾರೆ. ಇವ್ರೇನು ಬಿಲಿಯನ್ ಡಾಲರ್ ಡೀಲ್ ಮಾಡ್ತಾರೋ ಏನೋ” ಅಂತ ವ್ಯಂಗ್ಯ ಮಾಡಿದ್ದಾರೆ.

ಏನೇ ಆಗ್ಲಿ, ಈ ಘಟನೆಯಿಂದ ನಾವೆಲ್ಲಾ ಒಂದ್ ಪಾಠ ಕಲೀಬೇಕು. ಗಾಡಿ ಓಡಿಸುವಾಗ ಹುಷಾರಾಗಿರಬೇಕು. ಫೋನ್ ನೋಡೋದೆಲ್ಲಾ ಆಮೇಲೆ ಮಾಡ್ಕೋಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read