ಪುಣೆಯ ಲೋಣಿ ಕಾಲ್ಭೋರ್‌ನಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಹೆಂಡತಿ ತನ್ನ ಪ್ರಿಯಕರನ ಸಹಾಯದಿಂದ ಗಂಡನನ್ನು ಕೊಲೆ ಮಾಡಿದ್ದಾಳೆ. ರವೀಂದ್ರ ಕಾಶಿನಾಥ್ ಕಾಲ್ಭೋರ್ (45 ವರ್ಷ) ಎಂಬುವವರನ್ನ ಅವರ ಹೆಂಡತಿ ಶೋಭಾ ರವೀಂದ್ರ ಕಾಲ್ಭೋರ್ (42 ವರ್ಷ) ಹಾಗೂ ಆಕೆಯ ಪ್ರಿಯಕರ ಗೋರಖ್ ತ್ರಿಂಬಕ್ ಕಾಲ್ಭೋರ್ (41 ವರ್ಷ) ಸೇರಿ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಈ ಕೊಲೆಗೆ ಕಾರಣ ಅಕ್ರಮ ಸಂಬಂಧ. ರವೀಂದ್ರನ ಹೆಂಡತಿಗೆ ಗೋರಖ್ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಷಯ ರವೀಂದ್ರನಿಗೆ ತಿಳಿದಿದ್ದರಿಂದ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ರವೀಂದ್ರ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಇದರಿಂದ ಬೇಸತ್ತ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ.
ಸೋಮವಾರ ರಾತ್ರಿ ರವೀಂದ್ರ ಕುಡಿದು ಮನೆ ಮುಂದೆ ಮಲಗಿದ್ದ. ಆಗ ಆತನ ಹೆಂಡತಿ ಹಾಗೂ ಪ್ರಿಯಕರ ಸೇರಿ ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬೆಳಗ್ಗೆ ಮನೆಯ ಮುಂದೆ ರವೀಂದ್ರನ ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪೊಲೀಸರು ತನಿಖೆ ನಡೆಸಿ ಹೆಂಡತಿ ಹಾಗೂ ಪ್ರಿಯಕರನನ್ನು ಬಂಧಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಹೆಂಡತಿ ಹಾಗೂ ಪ್ರಿಯಕರನ ಅಕ್ರಮ ಸಂಬಂಧ ಹಾಗೂ ಕೊಲೆಗೆ ಮಾಡಿದ ಪ್ಲಾನ್ ಬಗ್ಗೆ ಮಾಹಿತಿ ಹೊರಬಂದಿದೆ. ಈ ಘಟನೆ ಆ ಊರಿನಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ.