ಪುಣೆಯಲ್ಲಿ ಬಸ್ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಅಪಾಯದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಆಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೆಕ್ಯಾನಿಕ್ ಸಮಯ ಪ್ರಜ್ಞೆಯಿಂದ ರಕ್ಷಿಸಲಾಗಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ ಕುತ್ತಿಗೆಗೆ ಸ್ಕೂಟರ್ ಸ್ಟ್ಯಾಂಡ್ ಹೊಕ್ಕಿತ್ತು. ಘಟನೆ ಪುಣೆಯ ವನಾಜ್ ಬಳಿಯ ಪೌಡ್ ರಸ್ತೆಯಲ್ಲಿ ನಡೆದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, 19 ವರ್ಷದ ಯುವಕನ ಕುತ್ತಿಗೆಗೆ, ಸ್ಕೂಟರ್ ಸ್ಟ್ಯಾಂಕ್ ನುಗ್ಗಿರೋದನ್ನು ನೋಡಿದ್ದಾರೆ. ತಕ್ಷಣ ಮೆಕ್ಯಾನಿಕ್ ಕರೆಸಿ, ಸ್ಕೂಟರ್ ನಿಂದ ಸ್ಟ್ಯಾಂಡ್ ಬೇರ್ಪಡಿಸಿದ್ದಾರೆ.
ಸ್ಟ್ಯಾಂಡ್ ಆರು ಇಂಚು ಒಳಗೆ ಹೋಗಿದ್ದ ಕಾರಣ, ತೀವ್ರ ರಕ್ತಸ್ರಾವವಾಗಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಕ್ಷಣ ಡೆಕ್ಕನ್ ಜಿಮ್‌ಖಾನಾ ಪ್ರದೇಶದ ಸಹ್ಯಾದ್ರಿ ಆಸ್ಪತ್ರೆಗೆ ದಾಖಲಿಸಲಾಯ್ತು. ರಕ್ತ, ಶ್ವಾಸಕೋಶಕ್ಕೆ ಹೋಗೋದನ್ನು ತಪ್ಪಿಸಲು ಗಾಯಾಳುವನ್ನು ಕೂರಿಸಿದ್ದ ವೈದ್ಯರು ಸತತ ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಸ್ಟ್ಯಾಂಡ್ ಹೊರಗೆ ತೆಗೆದಿದ್ದಾರೆ. ಆತನ ಚೇತರಿಕೆಗೆ ಇನ್ನೂ 15 -20 ದಿನ ಬೇಕು ಎಂದು ವೈದ್ಯರು ಹೇಳಿದ್ದಾರೆ. ಅನ್ನನಾಳ, ಬಾಯಿಯ ಕೆಲ ಸ್ನಾಯುಗಳಿಗೆ ಹಾನಿಯಾಗಿದೆ. ಬೆನ್ನಿನ ಮೂಳೆಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
https://twitter.com/Encounter_India/status/1817527360448503960?ref_src=twsrc%5Etfw%7Ctwcamp%5Etweetembed%7Ctwterm%5E1817527360448503960%7Ctwgr%5Ef8c5942e2b7ef79a94b312aa1279a3e31477985a%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fpuneteencriticallyinjuredasscooterstandpenetratesneckinbusaccidentdocssuccessfullyremoveit-newsid-n624089037