ವಾಮಚಾರಿಗೆ ಸೊಸೆಯ ಋತುಸ್ರಾವದ ರಕ್ತ ಕೊಟ್ಟ ಅತ್ತೆ: ದೂರು ದಾಖಲು

ಪುಣೆ: ‘ಅಘೋರಿ ಪೂಜೆ’ಯ ಅಂಗವಾಗಿ 28 ವರ್ಷದ ಮಹಿಳೆಯೊಬ್ಬರು ಮಾನವ ಮತ್ತು ಪ್ರಾಣಿಗಳ ಮೂಳೆ ಪುಡಿಯನ್ನು ಸೇವಿಸುವಂತೆ ಒತ್ತಾಯಿಸಿದ ತಿಂಗಳ ನಂತರ ಭಯಾನಕ ಘಟನೆಯೊಂದು ನಡೆದಿದೆ. ಸೊಸೆಯ ಋತುಸ್ರಾವದ ರಕ್ತವನ್ನು ಒತ್ತಾಯ ಪೂರ್ವಕವಾಗಿ ತೆಗೆದ ಅತ್ತೆ, ಅದನ್ನು 50 ಸಾವಿರ ರೂಪಾಯಿಗೆ ತಾಂತ್ರಿಕರಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಇದಾಗಿದೆ.

ಮಹಿಳೆಯ ಅತ್ತೆ ಮತ್ತು ಮಾವ ಸೇರಿ ತನ್ನ ಮುಟ್ಟಿನ ರಕ್ತವನ್ನು ವಾಮಾಚಾರಕ್ಕಾಗಿ ಮಾರಾಟ ಮಾಡಿರುವುದಾಗಿ ಸೊಸೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅತ್ತೆ-ಮಾವನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

2019 ರಲ್ಲಿ ನಡೆದ ಮದುವೆಯ ನಂತರ ತನ್ನ ಅತ್ತೆ ತನಗೆ ಚಿತ್ರಹಿಂಸೆ ನೀಡುತ್ತಿದ್ದರು. ನಂತರ, ಋತುಸ್ರಾವವಾದಾಗ ಅತ್ತೆಯ ಕೈಕಾಲುಗಳನ್ನು ಕಟ್ಟಿ, ಹತ್ತಿ ಸ್ವ್ಯಾಬ್‌ನಿಂದ ಮುಟ್ಟಿನ ರಕ್ತವನ್ನು ತೆಗೆದು 50,000 ರೂಪಾಯಿಗಳಿಗೆ ವಾಮಾಚಾರಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಸೊಸೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ, 2013 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read