ಈ ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ….!

ಪುಣೆ: ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಆರೋಗ್ಯ ವಿಭಾಗವು ಸಾರ್ವಜನಿಕ ಸ್ಥಳಗಳಾದ ಪಾದಚಾರಿ ಮಾರ್ಗಗಳು, ಸಾರ್ವಜನಿಕ ಚೌಕಗಳು ಅಥವಾ ನದಿಪಾತ್ರಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ ವ್ಯಕ್ತಿಗಳಿಗೆ 500 ರೂಪಾಯಿ ದಂಡ ವಿಧಿಸಲು ಪ್ರಾರಂಭಿಸಿದೆ.

ನಾಗರಿಕ ಪ್ರಾಧಿಕಾರವು ಪಾರಿವಾಳದ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಮನಗಂಡಿತು. ಇದು ಅನಾರೋಗ್ಯಕರ ಎಂದು ಭಾವಿಸಿರುವ ಪ್ರಾಧಿಕಾರವು, ಉಸಿರಾಟದ ಕಾಯಿಲೆಗಳ ಹರಡುತ್ತದೆ ಎನ್ನುವ ಕಾರಣಕ್ಕೆ ದಂಡ ವಿಧಿಸಲು ಆರಂಭಿಸಿದೆ.

ಕಲ್ಯಾಣಿ ನಗರದ ಮಾರಿಗೋಲ್ಡ್ ಸೊಸೈಟಿಯ ನಿವಾಸಿಯೊಬ್ಬರಿಗೆ ದಂಡ ವಿಧಿಸಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷಿಗಳ ಹಿಕ್ಕೆಗಳು ಸೋಂಕುಗಳನ್ನು ಹರಡುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಮಹಾರಾಷ್ಟ್ರ, ಥಾಣೆ ಮತ್ತು ಪನ್ವೇಲ್ ನಾಗರಿಕ ಸಂಸ್ಥೆಗಳು ಪಾರಿವಾಳಗಳಿಗೆ ಆಹಾರ ನೀಡುವ ಜನರಿಗೆ ದಂಡ ವಿಧಿಸಲು ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read