Video: ಜಗಳವಾಡುತ್ತಿದ್ದಾಗಲೇ ಕುಸಿದು ಬಿದ್ದ ವೃದ್ಧೆ; ಹೃದಯಾಘಾತದಿಂದ ಸ್ಥಳದಲ್ಲೇ ಸಾವು…!

ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಗಳದ ಸಂದರ್ಭದಲ್ಲಿ ವೃದ್ಧ ಮಹಿಳೆ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ಪುಣೆಯ ಕಲ್ಯಾಣಿ ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದ್ದು, 65 ವರ್ಷದ ತಾರಾ ರಾಜಾರಾಮ್ ಅಗರ್ವಾಲ್ ಮೃತಪಟ್ಟವರಾಗಿದ್ದಾರೆ. ಇವರ ಪಕ್ಕದ ಮನೆ ನಿವಾಸಿ ಪೀಠೋಪಕರಣಗಳನ್ನು ಮಾಡಿಸುತ್ತಿದ್ದು ಈ ಸಂದರ್ಭದಲ್ಲಿ ಧೂಳು ಹಾಗೂ ಹೆಚ್ಚಿನ ಶಬ್ದ ಹೊರ ಹೊಮ್ಮುತ್ತಿತ್ತು ಎನ್ನಲಾಗಿದೆ. ಹೀಗಾಗಿ ತಾರಾ ಅವರ ಪುತ್ರ ಮೊದಲಿಗೆ ಪಕ್ಕದ ಮನೆಯವರ ಜೊತೆ ವಾಗ್ವಾದ ಆರಂಭಿಸಿದ್ದಾರೆ.

ಪುತ್ರನನ್ನು ಬೆಂಬಲಿಸಿ ತಾರಾ ಮತ್ತು ಇತರೆ ಕುಟುಂಬ ಸದಸ್ಯರು ಸಹ ಆಗಮಿಸಿದ್ದು ಈ ಸಂದರ್ಭದಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ತಾರಾ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸನಿಹದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೃದಯಾಘಾತವೇ ತಾರಾ ಅವರ ಸಾವಿಗೆ ಕಾರಣವೆಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಅಗರ್ವಾಲ್ ಕುಟುಂಬ ತಮ್ಮ ನೆರೆಮನೆಯವನ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read