ಸಾರ್ವಜನಿಕರ ಗಮನಕ್ಕೆ : ನೀರಿನ ಕಂದಾಯ ಕಟ್ಟಲು 7 ದಿನ ಕಾಲಾವಕಾಶ

ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು/ಮಾಲೀಕರುಗಳು 1 ವರ್ಷಕ್ಕಿಂತ ಮೇಲ್ಪಟ್ಟು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ 7 ದಿನಗಳೊಗಾಗಿ ಕಡ್ಡಾಯವಾಗಿ ಪಾವತಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಬಳಕೆದಾರರು/ ಮಾಲೀಕರು ನೀರಿನ ಕಂದಾಯ ಪಾವತಿ ಮಾಡಲು ತಪ್ಪಿದಲ್ಲಿ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು. ಆದುದರಿಂದ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಅಹಿತಕರ ಘಟನೆಗೆ ಬಳಕೆದಾರರು/ ಮಾಲೀಕರು ಅವಕಾಶ ನೀಡದೇ 7 ದಿನದೊಳಗಾಗಿ ನೀರಿನ ಕಂದಾಯವನ್ನು ಪಾವತಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read