BIG NEWS: ವೈದ್ಯಗೆ ನಗ್ನ ವಿಡಿಯೋ ಕಳುಹಿಸುವಂತೆ ಕಿರುಕುಳ: PSI ವಿರುದ್ಧ ದೂರು ದಾಖಲು

ಬೆಂಗಳೂರು: ರಕ್ಷಣೆ ಮಾಡಬೇಕಾದ ಪೊಲೀಸಪ್ಪನೇ ವೈದ್ಯೆಯೊಬ್ಬರಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯೆಗೆ ನಗ್ನ ವಿಡಿಯೋ, ಫೋಟೋ ಕಳುಹಿಸುವಂತೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ.

ವೈದ್ಯೆ, ಸಬ್ ಇನ್ಸ್ ಪೆಕ್ಟರ್ ರಾಜಕೂಮಾರ್ ಜೋಡಟ್ಟಿ ವಿರುದ್ಧ ಪೊಲೀಸ್ ಕಮಿಷ್ನರ್ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ.

ಫೇಸ್ ಬುಕ್ ಮೂಲಕ 2020ರಲ್ಲಿ ಸಬ್ ಇನ್ಸ್ ಪೆಕ್ಟರ್ ಗೆ ವೈದ್ಯೆ ಪರಿಚಯವಾಗಿದೆ. ಈ ವೇಳೆ ಯುವತಿ ಎಂಬಿಬಿಎಸ್ ಓದುತ್ತಿದ್ದರು. ಅದೇ ವರ್ಷ ರಾಜಕುಮಾರ್ ಪೊಲೀಸ್ ಅಕಾಡೆಮಿಯಲ್ಲಿ ಪಿಎಸ್ ಐ ಟ್ರೈನಿಂಗ್ ನಲ್ಲಿದ್ದರು. ಇಬ್ಬರ ನಡುವೆ ಸ್ನೇಹ-ಪ್ರೀತಿ ಇತ್ತು.

ಇದೀಗ ವೈದ್ಯೆಯಾಗಿರುವ ಯುವತಿಗೆ ಕೆಲ ದಿನಗಳ ಹಿಂದಿನಿಂದ ರಾಜಕುಮಾರ್, ನಗ್ನ ವಿಡಿಯೋ, ಫೋಟೋ ಕಳುಹಿಸುವಂತೆ ಕಿರುಕುಳ ನೀಡಿತ್ತಿದ್ದಾನಂತೆ. ಅಲ್ಲದೇ ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಹೆದರಿಸಿ ಕಿರುಕುಳ ನೀಡುತ್ತಿದ್ದಾನಂತೆ. ಸಬ್ ಇನ್ಸ್ ಪೆಕ್ಟರ್ ರಾಜಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವೈದ್ಯೆ ಬೆಂಗಳೂರು ಪೊಲೀಸ್ ಕಮಿಷ್ನರ್ ಮೊರೆ ಹೋಗಿದ್ದಾರೆ.

ಅಲ್ಲದೇ ವೈದ್ಯೆಯಿಂದ ರಾಜಕುಮಾರ್ ಹಂತ ಹಂತವಾಗಿ 1.71 ಲಕ್ಷ ಹಣವನ್ನೂ ಪಡೆದುಕೊಂಡಿದ್ದು, ಹ್ನ ವಾಪಾಸ್ ಕೆಲಿದರೆ ಕೊಡುವುದಿಲ್ಲ. ಬೇಕಿದ್ದರೆ ಠಾಣೆಗೆ ಬಂದು ತೆಗೆದುಕೊಂಡು ಹೋಗು ಎಂದು ಪೀಡಿಸುತ್ತಿದ್ದಾನಂತೆ ನೊಂದ ವೈದ್ಯೆ ಆತ್ಮಹತ್ಯೆಗೂ ಯತ್ನಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read