ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ನಜೀರ್ ಮಂಗಳೂರು ಮತ್ತು ಗಾಂಧಿಯನ್ ನೆಹರುವಿಯನ್ ಮಗರ್ ಎಂಬ ಎರಡು ಫೇಸ್ಬುಕ್ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 21ರಂದು ಮಧ್ಯಾಹ್ನ 3 ಗಂಟೆಗೆ ಸಾಮಾಜಿಕ ಜಾಲತಾಣ ಮಾನಿಟರಿಂಗ್ ನಿಗಾವಣಿ ಕರ್ತವ್ಯ ಹಿನ್ನೆಲೆಯಲ್ಲಿ ಫೇಸ್ಬುಕ್ ವೀಕ್ಷಿಸುವಾಗ ನಜೀರ್ ಮಂಗಳೂರು ಎಂಬ ಫೇಸ್ಬುಕ್ ಖಾತೆಯಿಂದ ಎರಡು ಖಾತೆಗಳಿಗೆ ಟ್ಯಾಗ್ ಮಾಡಿರುವ ಖಾತೆಯಿಂದ ಎಐ ವಿಡಿಯೋ ಬಟ್ ಫನ್ನಿ ಎಂಬ ಶೀರ್ಷಿಕೆ ಇರುವ 10 ಸೆಕೆಂಡುಗಳ ವಿಡಿಯೋ ತುಣುಕನ್ನು ಶೇರ್ ಮಾಡಲಾಗಿದೆ. ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯ ಎಸಗುವಂತೆ ಮಾಡಲಾಗಿದೆ. ಹೀಗಾಗಿ ಫೇಸ್ಬುಕ್ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಐ ಶಿವಕುಮಾರ್ ದೂರು ನೀಡಿದ್ದಾರೆ. ಇದರ ಆದರದ ಮೇಲೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.