ಆಸ್ತಿ ಖರೀದಿ, ಮಾರಾಟಗಾರರಿಗೆ ಮತ್ತೊಂದು ಗುಡ್ ನ್ಯೂಸ್: ಇನ್ನು ರಜಾ ದಿನಗಳಲ್ಲೂ ಆಸ್ತಿ ನೋಂದಣಿ ಸೇವೆ

ಬೆಂಗಳೂರು: ಇನ್ನೂ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ ಸೇವೆ ಲಭ್ಯವಿರಲಿದೆ. ಅ. 21ರಿಂದ ಶನಿವಾರ ಮತ್ತು ಭಾನುವಾರ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸೇವೆ ಲಭ್ಯವಿರುತ್ತದೆ.

ಪ್ರತಿ ನೋಂದಣಿ ಜಿಲ್ಲೆಯ ಬಗ್ಗೆ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಸೇವೆ ಇರಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸುಗಮ ಆಡಳಿತ ಉದ್ದೇಶದಿಂದ ಮುಂದಿನ ತಿಂಗಳು ಅ. 21ರಿಂದ ಉಪ ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ನೊಂದಣಿ ಜಿಲ್ಲೆಯಲ್ಲಿ ಐದಾರು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಂದು ಕಚೇರಿಯಲ್ಲಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾರದ ರಜೆ ನೀಡಲಾಗುತ್ತದೆ. ಯಾವ ನೋಂದಣಿ ಕಚೇರಿ ರಜೆ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬುದ ಕುರಿತು ಮೊದಲೇ ಪಟ್ಟಿ ಬಿಡುಗಡೆ ಮಾಡಲಾಗುವುದು.

ನೋಂದಣಿಯಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡಲಾಗುವುದು. ವಾರದ ದಿನಗಳಲ್ಲಿ ದುಡಿಯುವ ವರ್ಗದ ಜನ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗೆ ಬರುವುದು ಕಷ್ಟವಾಗುತ್ತಿದೆ. ಇದನ್ನು ಗಮನಿಸಿ ಜನರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಶನಿವಾರ, ಭಾನುವಾರ ರಜಾ ದಿನಗಳಲ್ಲೂ ನೋಂದಣಿ ಕಚೇರಿ ತೆರೆಯಬೇಕೆಂಬ ಒತ್ತಾಯವಿತ್ತು. ಮುಖ್ಯಮಂತ್ರಿಗಳು ಈ ಬಗ್ಗೆ ಸೂಚನೆ ನೀಡಿದ್ದು, ಕಾನೂನು ತಿದ್ದುಪಡಿ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಸಮೀಪದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅನುಕೂಲಕರವಾದ ದಿನ, ಸಮಯದಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಇನ್ನು ರಜಾದಿನಗಳಲ್ಲೂ ಆಸ್ತಿ ನೋಂದಣಿ ಮಾಡಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read