BIG NEWS: ಒಂದೇ ವಾರದಲ್ಲಿ 1200 ಕೋಟಿ ರೂ. ಸಂಗ್ರಹ: ನಾಳೆಯಿಂದ ಹೊಸ ಮಾರ್ಗಸೂಚಿ ದರದಲ್ಲಿ ಆಸ್ತಿ ನೋಂದಣಿ

ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಅ.1ರ ಭಾನುವಾರದಿಂದ ಜಾರಿಯಾಗಿದೆ. ಅ. 2ರಂದು ಗಾಂಧಿ ಜಯಂತಿ ರಜೆ ಇರುವುದರಿಂದ ಅ.3ರ ಮಂಗಳವಾರದಿಂದ ಹೊಸ ದರಗಳ ಅನುಸಾರ ಸ್ಥಿರಾಸ್ತಿಗಳ ಮಾರಾಟ ದಸ್ತಾವೇಜುಗಳ ನೋಂದಣಿ ಆರಂಭವಾಗಲಿದೆ.

ರಾಜ್ಯದಲ್ಲಿ ಐದು ವರ್ಷಗಳ ನಂತರ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾದ ನಂತರ 20 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಆಸ್ತಿ ನೋಂದಣಿ ಆಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 1762 ಕೋಟಿ ರೂ. ಸಂಗ್ರಹವಾಗಿದೆ. ಸೆಪ್ಟೆಂಬರ್ ಕೊನೆಯ ವಾರ 1200 ಕೋಟಿ ರೂ. ಸಂಗ್ರಹವಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಾಳೆಯಿಂದ ಹೊಸ ಮಾರ್ಗಸೂಚಿ ದರಗಳ ಪ್ರಕಾರ ದಸ್ತಾವೇಜುಗಳ ನೋಂದಣಿಗೆ ಸಿದ್ಧತೆ ಮಾಡಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read