ಸುಮಾರು ವರ್ಷಗಳಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ ಖಾತಾ ಮತ್ತು ಬಿ ಖಾತಾ, ಎಂಬಿ ನಂಬರ್ ನಮೂನೆ 3 ನ್ನು ಪಡೆಯಲು ಸಾರ್ವಜನಿಕರು ಪರದಾಡುವಂತ ಸ್ಥಿತಿ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಮನೆಬಾಗಿಲಿಗೆ ಎ ಖಾತಾ ಮತ್ತು ಬಿ ಖಾತಾ ಫಾರಂ ನಂಬರ್ 3ರ ವಿತರಣೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ತುಂಬಾ ಅನುಕೂಲವಾಗಿದೆ.
ಎ ಖಾತಾ, ಬಿ ಖಾತಾದಿಂದ ಜನರಿಗೆ ಸರ್ಕಾರದಿಂದ ವಿವಿಧ ಗೃಹ ಯೋಜನೆಗಳಡಿ ಸಹಾಯಧನ, ಸಾಲ ಸೌಲಭ್ಯಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಇಂತಹ ನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ.
ಕೊಪ್ಪಳ ನಗರದ ಮೂರನೇ ವಾರ್ಡಿನಲ್ಲಿ ಕೊಪ್ಪಳ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕೊಪ್ಪಳ ನಗರಸಭೆ ವತಿಯಿಂದ ಇ-ಖಾತಾ ಅಭಿಯಾನ ಮತ್ತು ಎ ಖಾತಾ ಮತ್ತು ಬಿ ಖಾತಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಸಾರ್ವಜನಿಕರು ತಮ್ಮ ಆಸ್ತಿಯ ಎ ಖಾತಾ ಮತ್ತು ಬಿ ಖಾತಾ ಸುಲಭವಾಗಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ನಮ್ಮ ಸರ್ಕಾರವು ಹಮ್ಮಿಕೊಂಡಿರುವ ಈ ಅಭಿಯಾನದಡಿ ಮೂರು ತಿಂಗಳ ಒಳಗಾಗಿ ಕೊಪ್ಪಳ ನಗರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದರಿಂದ ಕೊಪ್ಪಳ ನಗರಸಭೆ ವ್ಯಾಪ್ತಿಯ ಸುಮಾರು 8 ಸಾವಿರಕ್ಕೂ ಅಧಿಕ ನಿವೇಶನಗಳು, ಆಶ್ರಯ ಮನೆಗಳಿಗೆ ಅನುಕೂಲವಾಗಲಿದೆ. ಕೊಪ್ಪಳ ನಗರದ ಪ್ರತಿಯೊಬ್ಬರು ತಮ್ಮ ಮನೆಯ ಆಸ್ತಿ ದಾಖಲೆಯ ಪತ್ರಗಳನ್ನು ನೀಡಿ, ಎ ಖಾತಾ ಮತ್ತು ಬಿ ಖಾತಾ ಪಡೆದುಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ್, ಪೌರಾಯುಕ್ತರಾದ ಗಣಪತಿ ಪಾಟೀಲ್, ಓಣಿಯ ಹಿರಿಯರಾದ ಖಾಜಾ ಹುಸೇನ್ ರೆವಡಿ, ಸಲೀಂ ಅಳವಂಡಿ, ಹಜರತ್ ಮುಜಾವರ್ ಸೇರಿದಂತೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.