ಬೆಂಗಳೂರು : ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಸಂಬಂಧ online module ಸಿದ್ಧಪಡಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪ್ರೌಢಶಾಲಾ ಸಹಶಿಕ್ಷಕರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 25.04.2025 ರಂದು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುತ್ತದೆ.
ಮೇಲ್ಕಂಡಂತೆ ಪ್ರಕಟಿಸಿದ ಪಟ್ಟಿಗೆ ಸ್ವೀಕರಿಸಿದ ಆಕ್ಷೇಪಣೆಗಳನ್ನು ಸರಿಪಡಿಸಿ, ಇದರೊಂದಿಗೆ ಹೊಸದಾಗಿ ಸೇರ್ಪಡೆಗೊಂಡವರ ನಿಖರವಾದ ವಿವರಗಳನ್ನು ಸೇರಿಸುವುದರೊಂದಿಗೆ, inconsistence data ದಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿ ತಂತ್ರಾಂಶದಲ್ಲಿ ಅಳವಡಿಸಲು ಉಲ್ಲೇಖ (2) ರ ಸಭಾ ನಡಾವಳಿಯಲ್ಲಿ ಸೂಚಿಸಲಾಗಿರುತ್ತದೆ.
ವಿಭಾಗೀಯ ಕಛೇರಿಗಳಿಂದ ತಿದ್ದುಪಡಿಗಳನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಕಾರ್ಯವು ಪೂರ್ಣಗೊಂಡಿದ್ದ ಹಿನ್ನಲೆಯಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿ ಒಂದೇ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪುನಃ ಒಟ್ಟು 2935 ಅಪೂರ್ಣ ಮಾಹಿತಿಗಳು ಕಂಡುಬಂದಿರುತ್ತದೆ. ವಿಭಾಗವಾರು ಈ ಕೆಳಕಂಡ ಸಂಖ್ಯೆಯ inconsistency data ಕಂಡುಬಂದಿದೆ.
ಬೆಂಗಳೂರು ವಿಭಾಗ, 751,
ಮೈಸೂರು ವಿಭಾಗ 1301,
ಬೆಳಗಾವಿ ವಿಭಾಗ- 368,
ಕಲಬುರಗಿ ವಿಭಾಗ, 517
ತಂತ್ರಾಂಶದಲ್ಲಿ ಮಾಹಿತಿಯನ್ನು ಸರಿಯಾಗಿ ಇಂದೀಕರಿಸಲು ಈಗಾಗಲೇ ಹಲವಾರು ಬಾರಿ ನಿರ್ದೇಶನ ನೀಡಿದ್ದರೂ ಸಹ ತಪ್ಪು ಮಾಹಿತಿಯನ್ನು ಇಂದೀಕರಿಸಿರುವುದರಿಂದ ಸೂಚಿತ ಅವಧಿಯೊಳಗೆ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ.
ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರವರ ಆದೇಶದಂತೆ ತುರ್ತಾಗಿ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟಿಸಬೇಕಿರುತ್ತದೆ. ಸದರಿ ವಿವರಗಳನ್ನು ಸರಿಪಡಿಸಲು ಕಡೆಯ ಬಾರಿಗೆ ಅವಕಾಶವನ್ನು ನೀಡುತ್ತಾ ಈ ಕೆಳಕಂಡ ಸೂಚನೆಗಳನ್ನು ಪಾಲಿಸಿ ಸರಿಪಡಿಸಲು ತಿಳಿಸಿದೆ. inconsistency data ಪಟ್ಟಿಯ ಕ್ರಮ ಸಂಖ್ಯೆ 01 ರಲ್ಲಿ data to be corrected ಎಂಬ ಕಾಲಂ ಇರುತ್ತದೆ. ಸದರಿ ಕಾಲಂ ನಲ್ಲಿ
a) KGID ಸಂಖ್ಯೆ ನಮೂದಿಸದೇ ಇರುವ ಪ್ರಕರಣಗಳಲ್ಲಿ KGID ಸಂಖ್ಯೆಯನ್ನು ನಮೂದಿಸುವುದು.
b) KGID ಸಂಖ್ಯೆ ಪುನರಾವರ್ತನೆಯಾಗಿರುವ ಪ್ರಕರಣಗಳಲ್ಲಿ ಪ್ರಸ್ತುತ ಸದರಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ವಿಭಾಗದಲ್ಲಿ ಮಾತ್ರ ಸದರಿಯವರ KGID ಸಂಖ್ಯೆಯನ್ನು ನಮೂದಿಸಿ ADD ಎಂದು ನಮೂದಿಸುವುದು. ಇಲ್ಲವಾದಲ್ಲಿ delete ಎಂದು ನಮೂದಿಸುವುದು. (ಒಬ್ಬ ಶಿಕ್ಷಕರ ಕುರಿತು ಒಂದೇ ಬಾರಿ data ಇರಬೇಕು).
c) ಉಳಿದಂತೆ ಶಿಕ್ಷಕರ ಸೇವಾ ವಿವರಗಳಲ್ಲಿ ತಪ್ಪು ನಮೂದುಗಳಾಗಿದ್ದು (ಉದಾ : date of entry into present cadre, date of entry into privious cadre, date of birth, selection order date, ಇತ್ಯಾದಿಗಳು) ಇವುಗಳನ್ನು ತಂತ್ರಾಂಶದಲ್ಲಿ ಸರಿಪಡಿಸುವುದು.
ಮೇಲ್ಕಂಡಂತೆ ತಿದ್ದುಪಡಿಗಳನ್ನು ದಿನಾಂಕ : 02.07.2025 ರ ಅಪರಾಹ್ನ 12.30 ರೊಳಗೆ ತಂತ್ರಾಂಶದಲ್ಲಿ ನಮೂದಿಸುವುದು. ದತ್ತಾಂಶ ಸರಿಪಡಿಸಲು ಕಡೆಯ ಬಾರಿಗೆ ಅವಕಾಶ ಕಲ್ಪಿಸಿದೆ ಹಾಗೂ KGID ತಿದ್ದುಪಡಿಗಳನ್ನು est4cpibng@gmail.com ಗೆ ಇ-ಮೇಲ್ ಮಾಡಲು ತಿಳಿಸಿದೆ.
ಸಕಾಲದಲ್ಲಿ ಮಾಹಿತಿ ಸಲ್ಲಿಸಿದಲ್ಲಿ ಮಾತ್ರ data ವನ್ನು ಸ್ವೀಕರಿಸಲಾಗುವುದು. ಇಲ್ಲವಾದಲ್ಲಿ ಸದರಿ ಶಿಕ್ಷಕರ ಹೆಸರು ಕೈಬಿಟ್ಟು ಪಟ್ಟಿ ಪ್ರಕಟಿಸುವ ಅನಿರ್ವಾಯತೆಯಿರುತ್ತದೆ. ಯಾವುದೇ ಶಿಕ್ಷಕರ ಹೆಸರು ಕೈಬಿಟ್ಟು ಹೋದಲ್ಲಿ ಈ ಕುರಿತ ಆಗು ಹೋಗುಗಳಿಗೆ ಸಂಬಂಧಿಸಿದ ವಿಭಾಗೀಯ ಕಛೇರಿಯ ಸಹನಿರ್ದೇಶಕರು ನೇರ ಹೊಣೆಗಾರರಾಗಿರುತ್ತಾರೆ. ಆದ್ದರಿಂದ ಸದರಿ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸುವ ತುರ್ತಿನ ತೀವ್ರತೆ ಅರಿತು ಕೂಡಲೇ ಕ್ರಮಕ್ಕೆ ಮತ್ತೊಮ್ಮೆ ತಿಳಿಸಿದೆ.
ಪ್ರಸ್ತುತ ಸದರಿ ವಿಷಯವು ಸರ್ಕಾರದ ಹಂತದಲ್ಲಿ ಹಾಗೂ ಮಾಧ್ಯಮಗಳಲ್ಲಿ ಚರ್ಚಿತ ವಿಷಯವಾಗಿದ್ದು, ಈ ಸಂಬಂಧ ಕೂಡಲೇ ಕ್ರಮವಹಿಸುವ ಅಗತ್ಯತೆ ಇರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಅತ್ಯಾದ್ಯತೆ ಮೇರೆಗೆ ಕ್ರಮವಹಿಸಿ ಮಾಹಿತಿಯನ್ನು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಸಲ್ಲಿಸುವುದು. ಮತ್ತು ನಿಖರವಾದ ಮಾಹಿತಿಯನ್ನು ಇಂದಿಕರಿಸುವುದು ಎಂದು ತಿಳಿಸಿದೆ

