ಬೆಂಗಳೂರು : ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದಲ್ಲಿ ಫ್ರೊಫೆಸರ್ ಕಾರು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾದ ಘಟನೆ ಇದೀಗ ನಡೆದಿದೆ ಎಂದು ತಿಳಿದು ಬಂದಿದೆ.
ಮಹಾರಾಣಿ ಕಾಲೇಜು ಆವರಣದಲ್ಲಿಯೇ ಈ ಘಟನೆ ನಡೆದಿದ್ದು, ಇಂಗ್ಲೀಷ್ ಫ್ರೊಫೆಸರ್ ನಾಗರಾಜ್ ಎಂಬುವವರ ಕಾರು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಅಶ್ವಿನಿ ಎಂಬ ವಿದ್ಯಾರ್ಥಿನಿ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಹಾಗೂ ಮ್ಯೂಸಿಕ್ ಟೀಚರ್ ಜ್ಯೊತಿ ಎನ್ನುವವರಿಗೂ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂಗ್ಲೀಷ್ ಫ್ರೊಫೆಸರ್ ನಾಗರಾಜ್ ಬ್ರೇಕ್ ಒತ್ತುವ ಬದಲು ಆ್ಯಕ್ಸಲೇಟರ್ ತುಳಿದಿದ್ದಾರೆ ಎಂದು ಕೂಡ ಹೇಳಲಾಗಿದ್ದು, ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.