ಆಪ್ ಸಂಸದನಿಗೆ ಇಡಿ ಶಾಕ್: ಮದ್ಯ ನೀತಿ ಕೇಸ್ ನಲ್ಲಿ ಸಂಜಯ್ ಸಿಂಗ್ ನಿವಾಸದಲ್ಲಿ ಶೋಧ

ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತಂಡವು ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ಬುಧವಾರ ಶೋಧ ನಡೆಸಿದೆ.

ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಸಂಸದರಿಗೆ ಆಪ್ತರಾಗಿರುವ ಹಲವರ ನಿವೇಶನಗಳನ್ನು ಶೋಧಿಸಲಾಗಿತ್ತು. ದೆಹಲಿಯ ಸಂಜಯ್ ಸಿಂಗ್ ಅವರ ನಿವಾಸದಲ್ಲಿ ತನಿಖಾ ಸಂಸ್ಥೆ ED ತಂಡ ಪರಿಶೀಲನೆ ನಡೆಸಿದೆ. ಮದ್ಯ ನೀತಿ ಪ್ರಕರಣದಲ್ಲಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಂಜಯ್ ಸಿಂಗ್ ಹೆಸರನ್ನು ಉಲ್ಲೇಖಿಸಲಾಗಿತ್ತು.

ಇಡಿ ಚಾರ್ಜ್‌ಶೀಟ್ ಪ್ರಕಾರ, ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ದೆಹಲಿ ಮೂಲದ ಉದ್ಯಮಿ ದಿನೇಶ್ ಅರೋರಾ ಅವರು ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅವರ ನಿವಾಸದಲ್ಲಿ ಸಂಜಯ್ ಸಿಂಗ್ ಅವರ ಸಮ್ಮುಖದಲ್ಲಿ ಭೇಟಿಯಾಗಿದ್ದರು. ದೆಹಲಿ ಚುನಾವಣೆಗೂ ಮುನ್ನ ನಿಧಿ ಸಂಗ್ರಹಿಸಲು ಈ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read