ಇಂದಿನಿಂದ ಡಿಸೆಂಬರ್ ಒಂದರವರೆಗೆ ಪ್ರೊ ಕಬಡ್ಡಿ ಪಂದ್ಯಗಳು ನೋಯಿಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಂದು ಪ್ರೊ ಕಬಡ್ಡಿಯ 45ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಯುಪಿ ಯೋಧಾಸ್ ಮತ್ತು ಯು ಮುಂಬಾ ಮುಖಮುಖಿಯಾಗುತ್ತಿವೆ.
ಯು ಮುಂಬಾ ತಂಡ ಪ್ರೊ ಕಬಡ್ಡಿಯ ಅಂಕಪಟ್ಟಿಯಲ್ಲಿ ಈಗಾಗಲೇ ಮೂರನೇ ಸ್ಥಾನ ಕಾಯ್ದುಕೊಂಡರೆ, ಯುಪಿ ಯೋಧಾಸ್ ತಂಡ 10 ನೇ ಸ್ಥಾನದಲ್ಲಿದೆ. ಎರಡು ತಂಡಗಳ ಇತಿಹಾಸ ನೋಡುವುದಾದರೆ 12 ಬಾರಿ ಮುಖಾಮುಖಿಯಾಗಿದ್ದು, ಯು ಮುಂಬಾ ತಂಡ 5 ಬಾರಿ ಜಯ ಕಂಡಿದ್ದು. ಯುಪಿ ಯೋಧಾಸ್ ತಂಡ 6 ಬಾರಿ ಜಯ ಕಾಣುವ ಮೂಲಕ ಮೇಲುಗೈ ಸಾಧಿಸಿದೆ. ಒಂದು ಪಂದ್ಯ ಡ್ರಾ ನಿಂದ ಅಂತ್ಯಗೊಂಡಿದೆ.
ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಕಾದಾಡಲಿವೆ.