ಕಳೆದ ಪ್ರೋ ಕಬ್ಬಡ್ಡಿ ಲೀಗ್ ನಲ್ಲಿ ಪುಣೇರಿ ಪಲ್ಟನ್ ತಂಡ ತನ್ನ ಮೊದಲ ಟ್ರೋಫಿ ಗೆಲ್ಲುವ ಮೂಲಕ ಸಂಭ್ರಮಿಸಿದೆ. ಇದೀಗ ಪ್ರೊ ಕಬಡ್ಡಿಯ 11ನೇ ಆವೃತ್ತಿಗಾಗಿ ಕಬಡ್ಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಮುಂದಿನ ತಿಂಗಳು ಆಗಸ್ಟ್ 15 ಹಾಗೂ 16ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಬೆಂಗಳೂರು ಬುಲ್ಸ್ ತಂಡದಲ್ಲಿ ರೈಡರ್ಗಳ ಕೊರತೆ ಇದ್ದು, ಈ ಬಾರಿ ಸ್ಟಾರ್ ರೈಡರ್ ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ. ಯುಪಿ ಯೋಧಾಸ್ ತಂಡದಲ್ಲಿದ್ದ ದಾಖಲೆಗಳ ಸರದಾರ ಡುಮ್ಕಿ ಕಿಂಗ್ ಪರ್ದೀಪ್ ನರ್ವಾಲ್ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದು, ಬೇರೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಪವನ್ ಸೆಹ್ರಾವತ್ ಮತ್ತೊಮ್ಮೆ ತೆಲುಗು ಟೈಟನ್ಸ್ ನಲ್ಲೆ ಉಳಿಯಲಿದ್ದಾರ ಕಾದು ನೋಡಬೇಕಾಗಿದೆ. ಒಟ್ಟಾರೆ ಪ್ರೊ ಕಬಡ್ಡಿಯ 11ನೇ ಸೀಸನ್ ನ ಮನರಂಜನೆ ಪಡೆಯಲು ಕಬಡ್ಡಿ ಪ್ರೇಮಿಗಳು ಸಜ್ಜಾಗಿದ್ದಾರೆ.
https://twitter.com/ProKabaddi/status/1816401071105069471
https://twitter.com/ProKabaddi/status/1817447396940636526