ತವರಿಗೆ ಮರಳಿದ ವಿನೇಶ್ ಫೋಗಟ್ ಗೆ ಅದ್ದೂರಿ ಸ್ವಾಗತ; ಚಂದಾ ಎತ್ತಿ 750 ಕೆಜಿ ಲಡ್ಡು ವಿತರಿಸಿದ ಗ್ರಾಮಸ್ಥರು…!

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ತೂಕದ ಕಾರಣಕ್ಕೆ ಚಿನ್ನದ ಪದಕ ಮಿಸ್ ಮಾಡಿಕೊಂಡ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಭಾರತಕ್ಕೆ ಬಂದಿಳಿದಿದ್ದಾರೆ. ಶುಕ್ರವಾರದಂದು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಈ ಸಂದರ್ಭದಲ್ಲಿ ಭಾವುಕರಾದ ಅವರು ಕಣ್ಣೀರಿಟ್ಟಿದ್ದಾರೆ.

ವಿನೇಶ್ ಪೋಗಟ್ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ತವರು ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯ ಬಲಾಲಿ ಗ್ರಾಮಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಮನೆ ಮಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಿಹಿ ವಿತರಿಸಲು ದೇಣಿಗೆ ಸಂಗ್ರಹಿಸಿ, ಇದಕ್ಕೆ ವಾಚ್ ಮೆನ್ ನಿಂದ ಹಿಡಿದು ಗ್ರಾಮದ ಸರಪಂಚ್ ವರೆಗೆ ಎಲ್ಲರೂ ಕೈಲಾದಷ್ಟು ಹಣ ನೀಡಿದ್ದಾರೆ. ಇದರಿಂದ 750 ಕೆಜಿ ಲಡ್ಡು ತರಿಸಿ ಅದನ್ನು ಗ್ರಾಮದಲ್ಲಿ ವಿತರಿಸಲಾಗಿದೆ.

ತಮಗೆ ತವರಿನಲ್ಲಿ ಸಿಕ್ಕ ಈ ಆತ್ಮೀಯ ಸ್ವಾಗತಕ್ಕೆ ಭಾವುಕರಾದ ವಿನೇಶ್ ಫೋಗಟ್, ನನಗೆ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಸಿಗದಿದ್ದರೂ ಸಹ ಇವರೆಲ್ಲರ ಅಭಿಮಾನದಿಂದ ಸಾವಿರ ಚಿನ್ನದ ಪದಕ ಸಿಕ್ಕಷ್ಟು ಖುಷಿಯಾಗಿದೆ ಎಂದಿದ್ದಾರೆ. ವಿನೇಶ್ ಫೋಗಟ್ ಅವರ ಸ್ವಾಗತಕ್ಕೆ ಸ್ವಂತ ಊರಿನ ಜನರಲ್ಲದೆ ಅಕ್ಕಪಕ್ಕದ ಊರುಗಳಿಂದಲೂ ಸಹ ನೂರಾರು ಸಂಖ್ಯೆಯಲ್ಲಿ ಬಂದಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read