ಕೋಲ್ಕತ್ತಾದ ಮೊಬೈಲ್ ಫೋನ್ ರಿಪೇರಿ ಅಂಗಡಿಯೊಂದು ಯುವತಿಯ ಖಾಸಗಿ ವೀಡಿಯೊಗಳನ್ನು ಸೋರಿಕೆ ಮಾಡಿದ್ದು, ಮಹಿಳೆ ತೀವ್ರ ಕಿರುಕುಳ ಅನುಭವಿಸಿದ್ದಾಳೆ.
ಮಹಿಳೆ ತನ್ನ ಮೊಬೈಲ್ ಹಾಳಾಗಿದೆ ಎಂದು ಸರಿ ಮಾಡಿಕೊಡಿ ಎಂದು ಕೋಲ್ಕತ್ತಾದ ಸ್ಥಳೀಯ ರಿಪೇರಿ ಅಂಗಡಿಗೆ ತೆಗೆದುಕೊಂಡು ಹೋದಳು. ಆದರೆ, ಅಂಗಡಿಯ ಸಿಬ್ಬಂದಿ ಆ ಸಾಧನವನ್ನು ಸರಿಪಡಿಸುವ ಬದಲು ಮೊಬೈಲ್ ನಲ್ಲಿದ್ದ ಆಕೆಯ ಖಾಸಗಿ ವೀಡಿಯೊಗಳನ್ನು ಅನುಮತಿಯಿಲ್ಲದೆ ನೋಡಿ ಅದನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೀಡಿಯೋ ಸೋರಿಕೆಯಾದಾಗಿನಿಂದ, ಸಂತ್ರಸ್ತೆಗೆ ಸಾವಿರಾರು ಕಿರುಕುಳ ನೀಡುವ ಸಂದೇಶಗಳು ಬಂದಿದ್ದು, ಆಕೆ ಸಂಪೂರ್ಣ ಕುಗ್ಗಿ ಹೋ್ಗಿದ್ದಾಳೆ. ಈ ಬಗ್ಗೆ ಸಂತ್ರಸ್ತೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
“ನಾನು ಈಗ ಸಂಪೂರ್ಣವಾಗಿ ಕುಸಿದುಹೋಗಿದ್ದೇನೆ… ಅಂದಿನಿಂದ ನನ್ನ ಪೋಷಕರು ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ… ನಾನು ನನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಲೀಟ್ ಮಾಡಿದ್ದೇನೆ, ನನ್ನ ಫೋನ್ ಸಂಖ್ಯೆಯನ್ನು ಕೂಡ ಬದಲಾಯಿಸಿದೆ ಮತ್ತು ಎಲ್ಲರಿಂದ ಸಂರ್ಪಕವನ್ನು ಸಂಪೂರ್ಣ ಕಡಿತಗೊಳಿಸಿದ್ದೇನೆ ಎಂದು ಬರೆದಿದ್ದಾರೆ.
ಕಿರುಕುಳ ಎಷ್ಟು ತೀವ್ರವಾಗಿದೆಯೆಂದರೆ, ಅವಳು ತನ್ನ ಕೋಣೆಗೆ ಸೀಮಿತಳಾಗಿದ್ದಾಳೆ “ನಾನು ಇನ್ನು ಮುಂದೆ ನನ್ನ ಕೋಣೆಯಿಂದ ಹೊರಗೆ ಹೋಗುವುದಿಲ್ಲ, ನನ್ನ ಫೋನ್ ಬಳಸುವುದನ್ನು ನಿಲ್ಲಿಸಿದ್ದೇನೆ… ನನ್ನ ಇಡೀ ಜೀವನ ಕುಸಿದುಬಿದ್ದಂತೆ ಭಾಸವಾಗುತ್ತಿದೆ ಮತ್ತು ಇದರಿಂದ ನಾನು ಹೇಗೆ ಚೇತರಿಸಿಕೊಳ್ಳುತ್ತೇನೆಂದು ನನಗೆ ತಿಳಿದಿಲ್ಲ” ಎಂದು ಅವರು ಬರೆದಿದ್ದಾರೆ, ಅವರು ಸ್ವೀಕರಿಸಿದ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಗೌಪ್ಯತೆಯ ಉಲ್ಲಂಘನೆಯ ಬಗ್ಗೆ ಮಹಿಳೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
A girl in Kolkata gave her phone for repair
— Bloody Media (@bloody_media) August 26, 2025
The shop leaked her private videos
Since then, she’s been harassed nonstop with thousands of messages, lost her peace of mind, and even her parents stopped talking to her
Must Read Thread, Especially If You’re a Woman 🧵 pic.twitter.com/r98k23FmRi