SHOCKING : ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಕಾಮುಕ ಅರ್ಚಕ ಅರೆಸ್ಟ್..!

ಬೆಂಗಳೂರು : ಮಾಟ-ಮಂತ್ರದ ಹೆಸರಿನಲ್ಲಿ, ಪೂಜೆಯ ನೆಪದಲ್ಲಿ ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಅರ್ಚಕನೋರ್ವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೇರಳ ಮೂಲದ ಅರ್ಚಕ ಅರುಣ್ ಎಂದು ಗುರುತಿಸಲಾಗಿದೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ಬೆಳ್ಳಂದೂರು ಪೊಲೀಸರು ಕಾಮುಕ ಅರ್ಚಕನನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ

ನಮ್ಮ ಕುಟುಂಬಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ ಪರಿಹಾರ ಮಾಡಿಕೊಡಿ ಎಂದು ಕೇರಳದ ಪೆರಿಂಗೊಟ್ಟುಕರ ದೇವಾಲಯಕ್ಕೆ ಮಹಿಳೆಯೊಬ್ಬರು ತೆರಳಿದ್ದರು. 24 ಸಾವಿರ ಹಣ ಕಟ್ಟಿದ್ದರೆ ಪೂಜೆ ಮಾಡುವುದಾಗಿ ಹೇಳಿದ್ದ ಅರ್ಚಕ ಅರುಣ್ ಮಹಿಳೆಯ ಮೊಬೈಲ್ ನಂಬರ್ ಪಡೆದು ಸ್ವಲ್ಪ ದಿನ ಬಿಟ್ಟು ಬರಲು ಹೇಳಿದ್ದನು.

ತಡರಾತ್ರಿ ಮಹಿಳೆಯ ವಾಟ್ಸಾಪ್ ನಂಬರ್ ಗೆ ಅರ್ಚಕ ಬೆತ್ತಲಾಗಿ ಕರೆ ಮಾಡಿದ್ದನು. ಮಾಟಮಂತ್ರ ಹೋಗಬೇಕು ಅಂದರೆ ನೀನು ಬೆತ್ತಲಾಗಬೇಕೆಂದು ಅರ್ಚಕ ಮಹಿಳೆಗೆ ಹೇಳಿದ್ದನು. ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಆದರೆ ನೀನು ಒಪ್ಪದಿದ್ದರೆ ನಿನ್ನ ಮಕ್ಕಳನ್ನು ಸಾಯಿಸುವ ಹಾಗೆ ಪೂಜೆ ಮಾಡುತ್ತೇನೆ ಎಂದು ಅರ್ಚಕ ಅರುಣ್ ಬೆದರಿಕೆಯೊಡ್ಡಿದ್ದಾನೆ. ಅರುಣ್ ಹೇಳಿದಂತೆ ಮಹಿಳೆ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದಾಳೆ.

ನಂತರ ಅರುಣ್ ವಿಡಿಯೋ ಅಶ್ಲೀಲ ಮಾಡಿಟ್ಟುಕೊಡು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ ಕೇರಳಕ್ಕೆ ಬರಲು ಒತ್ತಾಯಿಸಿದ್ದಾನೆ. ಅರ್ಚಕ ಅರುಣ್ ಒತ್ತಾಯಕ್ಕೆ ಕೇರಳಕ್ಕೆ ಹೋಗಿದ್ದ ಮಹಿಳೆಗೆ ಆತ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಕೂಡ ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ಬೇಸತ್ತು ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ . ಅರ್ಚಕ ಅರುಣ್ ನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read