‘ಸಿವಿಲ್ ಪ್ರಕ್ರಿಯಾ ಸಂಹಿತಾ’ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ; ಇನ್ಮುಂದೆ ಬಡವರ ವ್ಯಾಜ್ಯಗಳು 6 ತಿಂಗಳಲ್ಲಿ ವಿಲೇವಾರಿ

ಬೆಂಗಳೂರು : ಸಿವಿಲ್ ಪ್ರಕ್ರಿಯಾ ಸಂಹಿತಾ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಇನ್ಮುಂದೆ ಬಡವರ ವ್ಯಾಜ್ಯಗಳು 6 ತಿಂಗಳಲ್ಲಿ ವಿಲೇವಾರಿ ಆಗಲಿದೆ .

ದೀರ್ಘಕಾಲದಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಬಡವರ ವ್ಯಾಜ್ಯಗಳನ್ನು ಆರು ತಿಂಗಳಲ್ಲಿ ತ್ವರಿತವಾಗಿ ವಿಲೇವಾರಿ ಮಾಡುವ ʼಸಿವಿಲ್ ಪ್ರಕ್ರಿಯಾ ಸಂಹಿತಾ (ಕರ್ನಾಟಕ ತಿದ್ದುಪಡಿ) ವಿಧೇಯಕ – 2023ʼಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ದೀರ್ಘಕಾಲದಿ೦ದ ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯಗಳ ವಿರುದ್ಧ ಹೋರಾಡಲು ಬಲವಿಲ್ಲದ ಬಡವರು ಹಾಗೂ ಇತರ ವ್ಯಕ್ತಿಗಳನ್ನು ಒಳಗೊ೦ಡಿರುವ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಲು ಈ ಕಾಯಿದೆ ಸಹಕಾರಿಯಾಗಲಿದೆ. ಇದೊಂದು ಕ್ರಾಂತಿಕಾರಕ ಕಾನೂನು, ದೇಶದಲ್ಲಿಯೇ ಮೊದಲು. ಇದರಿ೦ದ ರಾಜ್ಯದ ಕೋಟ್ಯಂತರ ಬಡವರಿಗೆ ಅನುಕೂಲವಾಗಲಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read