ತಿರುವನಂತಪುರಂ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇರುಮುಡಿ ಕಟ್ಟು ಹೊತ್ತು ಶಬರಿಮಲೆಯ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೊಸ ದಾಖಲೆ ಮಾಡಿದ್ದಾರೆ.
ಕೇರಳಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ದೇಗುಲ ದರ್ಶನ ಮಾಡಿದ್ದಾರೆ. ಅಯ್ಯಪ್ಪ ಮಾಲಧಾರಿಯಾಗಿ ಕಪ್ಪು ಸೀರೆ, ತಲೆಯಲ್ಲಿ ಇರುಮುಡಿ ಹೊತ್ತು ಅವರು ಸನ್ನಿಧಾನಕ್ಕೆ ಬಂದಿದ್ದರು. ರಾಷ್ಟ್ರಪತಿಗಳಾಗಿದ್ದರೂ ಜನಸಾಮಾನ್ಯರಂತೆ ನಿಯಮದ ಪ್ರಕಾರವೇ ದೇವರ ದರ್ಶನ ಪಡೆದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.ರಾಷ್ಟ್ರಪತಿಗಳು ಬಂದಿಳಿದ ಹೆಲಿಕಾಪ್ಟರ್ ಚಕ್ರಗಳು ಹೂತು ಕೆಲವು ಕ್ಷಣ ಆತಂಕ ಸೃಷ್ಟಿಯಾಗಿತ್ತು, ಬಳಿಕ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿತ್ತು.
A post shared by swamiye sharanam ayyappa 🙏 (@_ayyappa__swamy_)
