ದೇಶದಲ್ಲೇ ಬಹುಚರ್ಚಿತ ಮದುವೆಗೆ ಭರದ ಸಿದ್ಧತೆ, ಅಂಬಾನಿ ಪುತ್ರನ ವಿವಾಹಕ್ಕೆ ಹಾಜರಾಗಲಿದೆ ಗಣ್ಯ ಉದ್ಯಮಿಗಳ ದಂಡು…

 

 

 

 

 

 

 

 

 

 

 

 

ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರನ ಮದುವೆ ಸಿದ್ಧತೆಗಳು ಭರದಿಂದ ಸಾಗಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಶೀಘ್ರವೇ ಹಸೆಮಣೆ ಏರಲಿದ್ದಾರೆ. ಇದು ಅತ್ಯಂತ ಚರ್ಚಿತ ವಿವಾಹಗಳಲ್ಲೊಂದು. ಜಾಮ್‌ನಗರದಲ್ಲಿರುವ ರಿಲಯನ್ಸ್‌ ಟೌನ್‌ಶಿಪ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಲಿದೆ. ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅತಿಥಿಗಳಿಗಾಗಿ ಐಷಾರಾಮಿ ಹೋಟೆಲ್‌ಗಳನ್ನು ಅಂಬಾನಿ ಕುಟುಂಬ ಕಾಯ್ದಿರಿಸಿದೆ.

ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ಕೂಡ ಅಧಿಕೃತ ಸಮಾರಂಭವನ್ನು ಆಯೋಜಿಸಲಾಗಿದೆ. ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ 2022ರಲ್ಲಿ ರಾಜಸ್ಥಾನದಲ್ಲಿ ನೆರವೇರಿತ್ತು. ವಿವಾಹ ಪೂರ್ವ ಸಂಭ್ರಮಾಚರಣೆ ಗುಜರಾತ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಮಾರಂಭದಲ್ಲಿ ಬಾಲಿವುಡ್‌ ತಾರೆಯರ ದಂಡೇ ನೆರೆಯುವ ಸಾಧ್ಯತೆ ಇದೆ.

ಲೂಪಾ ಸಿಸ್ಟಮ್ಸ್ ಸಿಇಓ ಜೇಮ್ಸ್ ಮುರ್ಡೋಕ್, ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್ ಸಂಸ್ಥಾಪಕ ರೇ ಡಾಲಿಯೊ, ಸಿಸ್ಕೋ ಮಾಜಿ ಅಧ್ಯಕ್ಷ ಜಾನ್ ಚೇಂಬರ್ಸ್ ಮತ್ತು ಟೆಕ್ ಹೂಡಿಕೆದಾರ ಯೂರಿ ಮಿಲ್ನರ್ ಅವರಂತಹ ಉದ್ಯಮ ಲೋಕದ ಗಣ್ಯರು ಭಾಗವಹಿಸಲಿದ್ದಾರೆ. ಸೌದಿ ಅರಾಮ್ಕೊ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read