Shocking: ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಗೆ ಲೈಂಗಿಕ ಕಿರುಕುಳ; ಪ್ರತಿಭಟಿಸಿದ್ದಕ್ಕೆ ಹೊರ ದೂಡಿದ ದುಷ್ಕರ್ಮಿಗಳು

ತಮಿಳುನಾಡಿನಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯನ್ನು ರೈಲಿನಲ್ಲಿ ಪುರುಷರ ಗುಂಪೊಂದು ಲೈಂಗಿಕವಾಗಿ ಕಿರುಕುಳ ನೀಡಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ದೂಡಿದ್ದಾರೆ. ಕೊಯಂಬತ್ತೂರಿನಿಂದ ಚಿತ್ತೂರಿನಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದ ಮಹಿಳೆ, ಲೇಡಿಸ್‌ ಕಂಪಾರ್ಟ್ಮೆಂಟ್‌ ನಲ್ಲಿದ್ದಾಗ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಮಹಿಳೆ ಕೊಯಂಬತ್ತೂರಿನಿಂದ ರೈಲು ಹತ್ತಿದ್ದರು ಮತ್ತು ಲೇಡಿಸ್‌ ಕಂಪಾರ್ಟ್ಮೆಂಟ್‌ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವಿಭಾಗವನ್ನು ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಗೊತ್ತುಪಡಿಸಲಾಗಿದ್ದು ಆದಾಗ್ಯೂ, ಜೋಲಾರ್‌ಪೇಟ್‌ನಲ್ಲಿ ಇಲ್ಲಿಗೆ ಪ್ರವೇಶಿಸಿದ ಪುರುಷರ ಗುಂಪು, ಗರ್ಭಿಣಿ ಮಹಿಳೆ ತೆರಳುವಂತೆ ಹೇಳಿದರೂ ಕೇಳದೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದೆ. ತಿರುಪ್ಪೂರು ಜಿಲ್ಲೆಯ ಅವಿನಾಶಿಯಿಂದ ಬಂದ ಮಹಿಳೆ ಕೊಯಂಬತ್ತೂರಿನಿಂದ ತಿರುಪತಿಗೆ ಹೋಗುವಾಗ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.

ಮಹಿಳೆ ಶೌಚಾಲಯಕ್ಕೆ ಹೋದಾಗ ಕಿರುಕುಳವು ಹೆಚ್ಚಾಗಿದ್ದು, ಆಕೆ ಸಹಾಯಕ್ಕಾಗಿ ಕಿರುಚಿದಾಗ, ದಾಳಿಕೋರರು ಯಾವುದೇ ಕರುಣೆಯಿಲ್ಲದೆ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ದೂಡಿದ್ದಾರೆ. ಆಕೆಯ ಕಿರುಚಾಟವನ್ನು ಕೇಳಿ ರಕ್ಷಿಸಿದ ಸ್ಥಳೀಯರು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯ ಕೈ ಮತ್ತು ಕಾಲುಗಳಲ್ಲಿ ಮುರಿತಗಳಾಗಿದ್ದು ಆಕೆ ನೀಡಿದ ಮಾಹಿತಿ ಆಧಾರದ ಮೇಲೆ, ಕೆವಿ ಕುಪ್ಪಂ ಪ್ರದೇಶದ ಪೂಂಚೋಲೈ ಗ್ರಾಮದ ಹೇಮರಾಜ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read