ಕುಂಭಮೇಳದಲ್ಲಿ ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ʼತಿಥಿʼ ದಿನ ಪ್ರತ್ಯಕ್ಷ

ಪ್ರಯಾಗ್‌ರಾಜ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಮಹಾ ಕುಂಭ ಮೇಳದಲ್ಲಿ ಸತ್ತಿದ್ದಾರೆಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಮನೆಗೆ ಮರಳಿದ್ದಾರೆ. ಆದರೆ, ಅವರು ಬಂದಾಗ ನೆರೆಹೊರೆಯವರು ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು.

ಖುಂಟಿ ಗುರು ಎಂಬ ವ್ಯಕ್ತಿ ಜನವರಿ 29 ರಂದು ಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಅವರು ಕೆಲವು ಸಾಧುಗಳೊಂದಿಗೆ ಗಾಂಜಾ ಸೇವಿಸಿ ಇಹಲೋಕವನ್ನೇ ಮರೆತಿದ್ದರು.

ಸುಮಾರು ಎರಡು ವಾರಗಳ ನಂತರ, ಅವರು ಮನೆಗೆ ಮರಳಿದ್ದು, ಆಗ ಕುಟುಂಬ ಮತ್ತು ನೆರೆಹೊರೆಯವರು ಅವರ ನೆನಪಿಗಾಗಿ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದರು. ಅವರನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಭಯ್ ಅವಸ್ತಿ, ಖುಂಟಿ ಗುರು ಜನವರಿ 28 ರಂದು ಸಂಜೆ ಮಾಘ ಅಮಾವಾಸ್ಯೆಯಂದು ಸಂಗಮದಲ್ಲಿ ಸ್ನಾನ ಮಾಡಲು ಹೋಗಿದ್ದರು ಎಂದು ನೆನಪಿಸಿಕೊಂಡಿದ್ದು, ಮಾರನೆಯ ದಿನ ಕಾಲ್ತುಳಿತ ಸಂಭವಿಸಿದಾಗ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ನೆರೆಹೊರೆಯವರು ಅವರು ಸತ್ತಿದ್ದಾರೆಂದು ಭಾವಿಸಿದ್ದರು. ಹಲವಾರು ದಿನಗಳ ಹುಡುಕಾಟದ ನಂತರ ಅಂತಿಮವಾಗಿ ಅವರ ಸಾವನ್ನು ಒಪ್ಪಿಕೊಂಡು ಪ್ರಾರ್ಥನೆಗಳನ್ನು ಏರ್ಪಡಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read