ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಗೆ ರಚನೆಗೊಂಡಿರುವ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಯಾಗಿದ್ದಾರೆ. ಈ ಬಗ್ಗೆ ಗೃಹಬ್ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕೇಂದ್ರದ ಹುದ್ದೆಗೆ ಪ್ರಣವ್ ಮೊಹಂತಿ ನೇಮಕಗೊಂಡಿದ್ದಾರೆ. ನಿಜಕ್ಕೂ ಇದು ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್. ತಕ್ಷಣಕ್ಕೆ ಯಾವುದೋ ಹುದ್ದೆ ಕೊಡ್ತಾರೆ ಎಂಬುದು ಇಲ್ಲ. ಕೇಂದ್ರಕ್ಕೆ ನೇಮಕವಾಗಿರುವ ಬಗ್ಗೆ ನನಗೆ ತಿಳಿಸಲು ಭೇಟಿಯಾಗಿದ್ದರು ಎಂದು ಹೇಳಿದರು.
ಕೇಂದ್ರಕ್ಕೆ ಆಯ್ಕೆಯಾಗಿರುವ ಬಗ್ಗೆ ತಿಳಿಸಿದರು. ಅದು ಬಿಟ್ಟು ಬೇರೆ ಯಾವುದೇ ಚರ್ಚೆ ನಡೆದಿಲ್ಲ. ಎಸ್ ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ. ತನಿಖೆ ವೇಳೆ ನಾವ್ಯಾರೂ ಮಾತನಾಡಲು ಹೋಗುವುದಿಲ್ಲ ಎಂದರು.
ಇನ್ನು ಪ್ರಣವ್ ಮೊಹಂತಿ ಅವರನ್ನು ಕೇಂದ್ರದವರು ಕರೆದಾಗ ನಾವು ಕಳಿಸುತ್ತೇವೆ ಎಂಬುದೇನೂ ಇಲ್ಲ. ಇಂತಹ ಜಾಗಕ್ಕೆ ನೇಮಕ ಮಾಡಿದ್ದೇವೆ ಎಂದು ಕೇಂದ್ರ ಹೇಳಬೇಕು. ಮೊಹಂತಿ ಸೆಲೆಕ್ಟ್ ಆಗಿದ್ದಾರೆ ಅಷ್ಟೇ. ನಾವು ಕಳುಹಿಸುತ್ತೋವೋ ಬಿಡ್ತೇವೋ ಅದು ನಮಗೆ ಬಿಟ್ಟ ವಿಚಾರ ಎಂದು ಹೇಳಿದರು.