ದುರಾಡಳಿತದ ನಿಮ್ಮ ಸರ್ಕಾರದ ಮುಖವಾಡ ಕಳಚಿದೆ. ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ: ಸಿಎಂಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಭ್ರಷ್ಟಾಚಾರ ಮಾಡಿ ಮುಡಾ ನಿಭಾಯಿಸನಗಳನ್ನು ಕಬಳಿಸಿ ಕುಟುಂಬ ಸಮೇತ ಅನ್ಯಾಯ ಮಾಡಿರುವ ನಿಮ್ಮ ದುರಾಡಳಿತದ ಸರ್ಕಾರದ ಮುಖವಾಡ ಜನರ ಮುಂದೆ ಈಗಾಗಲೇ ಕಳಚಿದೆ. ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ಹೇಳಿದ್ದಾರೆ.

“ಭೂತದ ಬಾಯಲ್ಲಿ ಭಗವದ್ಗೀತೆ “ ಇದು ನಿಮಗೇ ಅನ್ವಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ವಾಸ್ತವದ ಇತಿಹಾಸದ ಅರಿವೇ  ಇಲ್ಲ ಅನಿಸುತ್ತದೆ. ಸಂವಿಧಾನದ ದುರುಪಯೋಗ ಮಾಡಿದ್ದು ಕಾಂಗ್ರೆಸ್. ಎಮರ್ಜೆನ್ಸಿ ಹೇರಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡಿ, ಜನರ, ಮಾಧ್ಯಮದ ಹಕ್ಕು ದಮನಿಸಿದ್ದು ಇಂದಿರಾ ನೇತೃತ್ವದ ಕಾಂಗ್ರೆಸ್. 91 ಕ್ಕೂ ಹೆಚ್ಚು ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ್ದು ನಿಮ್ಮ ಪಕ್ಷ ಅದೂ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರ ಮಾಡಿ ಮುಡಾ ಸೈಟುಗಳನ್ನು ಕಬಳಿಸಿ, ಕುಟುಂಬ ಸಮೇತ ಅನ್ಯಾಯ ಮಾಡಿರುವ ನಿಮ್ಮ ಮೇಲೆ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ನಿರ್ಧಾರವನ್ನು ರಾಜ್ಯದ ಉಚ್ಚ ನ್ಯಾಯಾಲಯವೇ ಎತ್ತಿಹಿಡಿದಿದೆ. ನಿಮಗೆ  ನ್ಯಾಯಾಲಯದ ತೀರ್ಪಿನ ಮೇಲೂ ನಂಬಿಕೆ ಇಲ್ಲವೆಂದಲ್ಲವೇ? ದುರಾಡಳಿತದ  ನಿಮ್ಮ ಸರ್ಕಾರದ ಮುಖವಾಡ ಜನರ ಮುಂದೆ ಈಗಾಗಲೇ ಕಳಚಿದೆ. ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ಆಗ್ರಹಿಸಿದ್ದಾರೆ.

https://twitter.com/JoshiPralhad/status/1839664869785641389

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read