BIG NEWS: ನೀಲಿ ಚಿತ್ರ ವೀಕ್ಷಣೆ ಕಲಿಯಲು RSS ಶಾಖೆಗೆ ಹೋಗಬೇಕಾ? ಎಂದಿದ್ದ HDKಗೆ ಖಡಕ್ ತಿರುಗೇಟು ನೀಡಿದ ಕಾಂಗ್ರೆಸ್

ಈ ಹಿಂದೆ ಕುಮಾರಸ್ವಾಮಿಯವರು “ನೀಲಿ ಚಿತ್ರ ವೀಕ್ಷಣೆ ಕಲಿಯಲು RSS ಶಾಖೆಗೆ ಹೋಗಬೇಕಾ?” ಎಂದು ಹೇಳಿದ್ದರು, ನಂತರ ಅದೇ ಕುಮಾರಸ್ವಾಮಿಯವರು RSS ಸಖ್ಯ ಬೆಳೆಸಿದರು ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

ಈಗ ಪರಿವಾರ ಸಮೇತ ಬಿಜೆಪಿ ಕೈ ಹಿಡಿದು RSS ಶಾಖೆಯಲ್ಲಿ ಟ್ರೈನಿಂಗ್ ಪಡೆದ ಪರಿಣಾಮ ಈ ಪೆನ್ ಡ್ರೈವ್ ಹೊರಬಂದಿತೆ ಹೆಚ್.ಡಿ.ಕುಮಾರಸ್ವಾಮಿ ಅವರೇ? ಅಂದಹಾಗೆ, ನಿಮ್ಮ ಮಗ ಪ್ರಜ್ವಲ್ ರೇವಣ್ಣನನ್ನು RSS ಶಾಖೆಗೆ ಕಳಿಸಿ ತರಬೇತಿ ಕೊಡಿಸಿದ್ದಿರಾ?! ಎಂದು ತಿರುಗೇಟು ನೀಡಿದೆ.

ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ, ಲಕ್ಷ್ಮಣ ಸವದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಶಾಖೆಗೆ ಹೋಗಿ ಕಲಿತದ್ದನ್ನಾ ನೋಡಿಲ್ವಾ? ವಿಧಾನಸೌಧದ ಕಲಾಪದ ಸಮಯದಲ್ಲಿ ನೀಲಿ ಚಿತ್ರ ನೋಡ್ತಾ ಕೂಡೋದನ್ನಾ ತಾನೆ ಅವರ ಶಾಖೆಯಲ್ಲಿ ಕಲಿಸಿದ್ದು? ಇಂತಾದ್ದನ್ನು ಕಲಿಯಲು ಆರ್ ಎಸ್ ಎಸ್ ಶಾಖೆಗೆ ಹೋಗಬೇಕಾ? ನಮಗೆ ಅವರ ಶಾಖೆ ಸಹವಾಸವೇ ಬೇಡ ಎಂದು ಹೇಳಿದ್ದರು. ಇದೀಗ ಇದೇ ವಿಚಾರವಾಗಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಲೆಳೆದಿದ್ದು, ಈಗ ಪರಿವಾರ ಸಮೇತ ಬಿಜೆಪಿ ಕೈ ಹಿಡಿದು RSS ಶಾಖೆಯಲ್ಲಿ ಟ್ರೈನಿಂಗ್ ಪಡೆದ ಪರಿಣಾಮ ಈ ಪೆನ್ ಡ್ರೈವ್ ಹೊರಬಂದಿತೆ? ಎಂದು ಕೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read