BIG NEWS: ಮಾಜಿ ಸಂಸದ ಪ್ರಜ್ವಲ್ ರೇವಣ್ಣ SIT ಕಸ್ಟಡಿ ಇಂದು ಅಂತ್ಯ; ಮತ್ತೆ ಎಸ್ಐಟಿ ವಶಕ್ಕಾ? ನ್ಯಾಯಾಂಗ ಬಂಧನಕ್ಕಾ?

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್ ಐಟಿ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಿದ್ದು, ಎಸ್ ಐಟಿ ಅಧಿಕಾರಿಗಳು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

ಎಸ್ ಐಟಿ ವಿಚಾರಣೆ ವೇಳೆ ಈವರೆಗೂ ಪ್ರಜ್ವಲ್ ರೇವಣ್ಣ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ತನ್ನ ಬಳಿ ಮೊಬೈಲ್ ಕೂಡ ಇಲ್ಲ. ತನ್ನ ವಿರುದ್ಧ ಆರೋಪ ಮಾಡಿರುವವರು ಯಾರು ಎಂಬುದೂ ಗೊತ್ತಿಲ್ಲ ಎಂದು ಹೇಳಿದ್ದನ್ನೇ ಹೇಳುತ್ತಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ಪ್ರಜ್ವಲ್ ಸರಿಯಾಗಿ ಸಹಕಾರ ನೀಡದ ಕಾರಣಕ್ಕೆ ಎಸ್ ಐಟಿ ಅಧಿಕಾರಿಗಳು ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಅಲ್ಲದೇ ಪ್ರಜ್ವಲ್ ವಿರುದ್ಧ ಇನೂ ಎರಡು ಪ್ರಕರಣಹಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ತನಿಖೆ ನಿಟ್ಟಿನಲ್ಲಿ ಎಸ್ ಐಟಿ ಕಸ್ಟಡಿಗೆ ಕೇಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರನ್ನು ಮತ್ತೆ ಎಸ್ ಐಟಿ ವಶಕ್ಕೆ ಪಡೆಯಲಿದೆಯೇ ಅಥವಾ ನ್ಯಾಯಾಂಗ ಬಂಧನ ನಿಟ್ಟಿನಲ್ಲಿ ಜೈಲು ಪಾಲಾಗಲಿದ್ದಾರಾ? ಕಾದುನೋದಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read