ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಸರ್ಕಾರದ್ದೇ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರ ನಾಲ್ಕೈದು ಜನರ ಹೆಸರು ಹೇಳಿದ್ದರೂ ಈವರೆಗೂ ಅವರನ್ನು ಬಂಧಿಸಿಲ್ಲ. ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರವೇ ಇದೆ ಎಂದರು.
ಧರ್ಮಸ್ಥಳದ ಬಗ್ಗೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಹೇಗೆ ಬೇಕೋ ಹಾಗೇ ತೇಜೋವಧೆ ಮಾಡಿದರು. ಬುರುಡೆ ತಂದುಕೊಟ್ಟಿದ್ದು ಯಾರು? ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ ಎಂದು ಮುಸುಕುಧಾರಿ ಹೇಳಿಕೆ ನೀಡಿದ್ದಾನೆ. ಹೀಗಿದ್ದರೂ ಅವರನ್ನು ಬಂದಿಸದೇ ವ್ಯವಸ್ಥಿತವಗೈ ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಮೃತ ವ್ಯಕ್ತಿಯ ಹೂತಿಟ್ಟ ಶವ ಹೊರತೆಗೆಯಲು ಕೋರ್ಟ್ ಅನುಮತಿಬೇಕು. ಆದರೆ ಧರ್ಮಸ್ಥಳದಲ್ಲಿ ಅದ್ಯಾವುದನ್ನೂ ಪಾಲಿಸದೇ ಬೇಕಾಬಿಟ್ಟಿಯಾಗಿ ಹತ್ತಕ್ಕೂ ಹೆಚ್ಚುಕಡೆ ಅಗೆದು ಶೋಧ ನಡೆಸಲಾಗಿದೆ. ಎಲ್ಲೂ ಶವದ ಕುರುಹೂ ಸಿಕ್ಕಿಲ್ಲ. ಸಾಕ್ಷಿ ದೂರುದಾರ ಕೆಲ ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಿದ್ದಾನೆ ಇದರ ಹಿಂದೆ ಹೊರ ರಾಜ್ಯದವರ ಕೈವಾಡವಿದೆ. ಸರ್ಕಾರ ಅದರ ಭಾಗವಾಗಿದೆ ಎಂದು ಆರೋಪಿಸಿದರು.