ಕಾಂಗ್ರೆಸ್ ನವರದ್ದು ಜನಾಂದೋಲನವಲ್ಲ, ಧನಾಂದೋಲನ; ಸಿದ್ದರಾಮಯ್ಯನವರರಿಗೆ ಒಂದಲ್ಲ, ಮೈತುಂಬಾ ಕಪ್ಪು ಚುಕ್ಕೆ; ಪ್ರಹ್ಲಾದ್ ಜೋಶಿ ಕಿಡಿ

ಮೈಸೂರು: ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರ ಮೆಲೆ ಒಂದಲ್ಲ, ಮೈತುಂಬಾ ಕಪ್ಪು ಚುಕ್ಕಿಗಳಿವೆ ಎಂದು ಕೇಂದ್ರಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರು ಮಾಡಿದ್ದು ಜನಾಂದೋಲನವಲ್ಲ, ಧನಾಂದೊಲನ. ಕಾಂಗ್ರೆಸ್ ಹೈಕಮಾಂಡ್ ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರೆ ನಿಮ್ಮ ಮೇಲೆ ಒಂದು ಕಪ್ಪು ಚುಕ್ಕೆ ಅಲ್ಲ, ನಿಮ್ಮ ಮೈತುಂಬಾ ಕಪ್ಪುಚುಕ್ಕೆ ಇವೆ ನೋಡಿಕೊಳ್ಳಿ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆಯೇ ಕಿತ್ತಾತ ನಡೆಯುತ್ತಿದೆ. ಹೊರಗಡೆ ನಾವು ಬಂಡೆ ಎನ್ನುತ್ತಾರೆ. ಒಳಗಡೆ ಹೊಡೆದಾಡಿಕೊಳ್ಳುತ್ತಿದ್ದಾರೆ. ಮುಡಾದ 14 ನಿವೇಶನ ವಾಪಾಸ್ ಕೊಡುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಳ್ಳಮಾಲು ವಾಪಾಸ್ ಕೊಟ್ಟ ತಕ್ಷಣ ಎಲ್ಲಾ ಮುಗಿಯಲ್ಲ. ಕಳ್ಳತನಕ್ಕೂ ಶಿಕ್ಷೆಯಾಗಬೇಕು ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read