ಮಕ್ಕಳ ತೂಕ ಹೆಚ್ಚಳವನ್ನು ನಿಯಂತ್ರಿಸಲು ಅಭ್ಯಾಸ ಮಾಡಿಸಿ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಕೊರೊನಾ ಕಾರಣದಿಂದ ಮಕ್ಕಳಿಗೆ ಶಾಲೆಗಳು ಇರದ ಕಾರಣ ಮನೆಯಲ್ಲಿದ್ದು ಅತಿಯಾಗಿ ತಿಂದು ಬೊಜ್ಜು ಬೆಳೆಸಿಕೊಂಡು ತೂಕ ಹೆಚ್ಚಳ ಮಾಡಿಕೊಂಡಿರುತ್ತಾರೆ. ಆದರೆ ಮಕ್ಕಳು ತಿನ್ನುವುದನ್ನು ಕಡಿಮೆ ಮಾಡಲು ಆಗುವುದಿಲ್ಲ. ಹಾಗಾಗಿ ಮಕ್ಕಳ ತೂಕ ಹೆಚ್ಚಳ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ.

*ಉತ್ಕಟಾಸನ (ಕುರ್ಚಿ ಭಂಗಿ) : ಇದು ತೊಡೆ ಮತ್ತು ಪುಷ್ಠದ ಟೋನ್ ಗಳನ್ನು ಬಲಪಡಿಸುತ್ತದೆ. ನಿಮ್ಮ ಚಾಪೆಯ ಮೇಲೆ ನಿಂತುಕೊಂಡು ಅಂಗೈಗಳನ್ನು ಒಂದಕ್ಕೊಂದು ಜೋಡಿಸಿ (ನಮಸ್ತೆ). ಬಳಿಕ ಕೈಗಳನ್ನು ತಲೆಯಿಂದ ಮೇಲಕ್ಕೆತ್ತಿ ನಿಮ್ಮ ಮೊಣಕಾಲನ್ನು ಬಾಗಿಸಿ ತೋಡೆಗಳನ್ನು ನೆಲಕ್ಕೆ ಸಮಾನಾಂತರವಾಗಿರಬೇಕು.

*ವೃಕ್ಷಾಸನ (ಮರದ ಭಂಗಿ) : ಈ ಆಸನವು ಹೊಟ್ಟೆಯ ಸ್ನಾಯುಗಳಿಗೆ ತುಂಬಾ ಒಳ್ಳೆಯದು. ನಿಮ್ಮ ಕಾಲುಗಳನ್ನು ಒಟ್ಟಿಗೆ ನಿಲ್ಲಿಸಿ. ಒಂದು ಕಾಲನ್ನು ಮೇಲಕ್ಕೆತ್ತಿ ಇನ್ನೊಂದು ಕಾಲಿನ ತೊಡೆಯ ಮೇಲೆ ಇಡಿ. ನಿಮ್ಮ ಕೈಗಳನ್ನು ಒಂದಕ್ಕೊಂದು ಜೋಡಿಸಿ ತಲೆಯಿಂದ ಮೇಲಕ್ಕೆತ್ತಿ ಸಮತೋಲನವನ್ನು ಕಾಪಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read