ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ ಸಿಗುತ್ತೆ 5 ಸಾವಿರ ರೂಪಾಯಿ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಒಂದು ವಿಶ್ವಾಸಾರ್ಹ ಯೋಜನೆಯಾಗಿದೆ. ಇದರ ಅಡಿಯಲ್ಲಿ ವೈಯಕ್ತಿಕವಾಗಿ ಅಥವಾ ಜಂಟಿ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಡಿ ಹೂಡಿಕೆದಾರರು ವಾರ್ಷಿಕವಾಗಿ ಶೇಕಡಾ 7.40ರವರೆಗೆ ಬಡ್ಡಿಯನ್ನು ಪಡೆಯಬಹುದು.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಡಿ ನೀವು ಕನಿಷ್ಠ 1500 ರಿಂದ ಗರಿಷ್ಠ 9 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರ ಮುಕ್ತಾಯ ಅವಧಿ ಗರಿಷ್ಠ 5 ವರ್ಷಗಳಾಗಿರುತ್ತವೆ. ಜಂಟಿ ಖಾತಯೆನ್ನು ಹೊಂದಿದ್ದರೆ ನೀವು ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಹಣವನ್ನು ಹೂಡಿಕೆ ಮಾಡಿದ ನಂತರ, ತಿಂಗಳ ಕೊನೆಯ ದಿನಾಂಕದಂದು ನಿಮಗೆ ಬಡ್ಡಿ ಸಿಗುತ್ತದೆ.

ಉದಾಹರಣೆಗೆ ನೀವು ಐದು ವರ್ಷದ ಅವಧಿಗೆ ಶೇಕಡಾ 7.40ರ ಬಡ್ಡಿ ದರದಲ್ಲಿ  9 ಲಕ್ಷ ಹೂಡಿಕೆ ಮಾಡಿದ್ದರೆ, ಮುಕ್ತಾಯದ ವೇಳೆಗೆ ಈ ಮೊತ್ತ 12 ಲಕ್ಷ 33 ಸಾವಿರ ಆಗುತ್ತದೆ. ಅದರಲ್ಲಿ 3 ಲಕ್ಷ 33 ಸಾವಿರ ಬಡ್ಡಿಯ ಮೊತ್ತವಾಗಿದೆ. ಈ ಮೊತ್ತವನ್ನು ನಿಮಗೆ 5 ವರ್ಷಗಳವರೆಗೆ ಮಾಸಿಕ ಕಂತುಗಳಲ್ಲಿ ಪಾವತಿಸಲಾಗುವುದು. ಅಂದರೆ  ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು, ಹೂಡಿಕೆ ಮಾಡಿದ ಹಣದ ಜೊತೆಗೆ ಬಡ್ಡಿ ಮೊತ್ತದಿಂದ ನೀವು ಮಾಸಿಕ 5500 ರೂಪಾಯಿಗಳನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read